More

    ಪಿಡಿಎಫ್ ಜನಕ, ಅಡೋಬ್ ಸಹ ಸಂಸ್ಥಾಪಕ ಚಾರ್ಲ್ಸ್ ಇನ್ನಿಲ್ಲ

    ಓಹಿಯೊ (ಅಮೆರಿಕ): ಕಂಪ್ಯೂಟರ್​ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತೀರಾ ಚಿರಪರಿಚಿತವಾಗಿರುವ ಪಿಡಿಎಫ್​, ಫೋಟೋಷಾಪ್​ನಂಥ ಹಲವಾರು ಸಾಫ್ಟ್​ವೇರ್​ಗಳನ್ನು ಅಭಿವೃದ್ಧಿಪಡಿಸಿರುವ ವಿಶ್ವಪ್ರಸಿದ್ಧ ಅಡೋಬ್‌ ಕಂಪೆನಿಯ ಸಹಸಂಸ್ಥಾಪಕ ಚಾರ್ಲ್ಸ್ ಚುಕ್‌ಗೆಶ್ಕೆ ಇನ್ನಿಲ್ಲ.

    ಇವರಿಗೆ 81 ವರ್ಷ ವಯಸ್ಸಾಗಿತ್ತು. ಬರಹ ಅಥವಾ ಚಿತ್ರವನ್ನು ಪೋರ್ಟೆಬಲ್‌ ಡಾಕ್ಯುಮೆಂಟ್‌ ಫಾರ್ಮೆಟ್​ಗೆ (ಪಿಡಿಎಫ್‌)ಪರಿವರ್ತಿಸುವ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದ ಇವರು, ಕಂಪ್ಯೂಟರ್​ ಲೋಕಕ್ಕೆ ಅಪಾರ ಕೊಡುಗೆ ನೀಡಿದವರು. ಪಿಡಿಎಫ್‌ನಂಥ ಸಾಫ್ಟ್​ವೇರ್​ನಿಂದಾಗಿ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದವರು ಇವರು.

    ಪಿಡಿಎಫ್‌ ಸಾಫ್ಟ್‌ವೇರ್‌ ಬಂದ ಬಳಿಕ ಬರಹ ಹಾಗೂ ಚಿತ್ರಗಳನ್ನು ಪೇಪರ್‌ ಮೇಲೆ ಪ್ರಿಂಟ್‌ ಮಾಡುವುದು ಅತ್ಯಂತ ಸುಲಭವ ವಿಧಾನ ಎನಿಸಿಕೊಂಡಿತು. ಈ ಮೂಲಕ ಪಿಡಿಎಫ್‌ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಯಿತು. ಚಾರ್ಲ್ಸ್ ಅಡೋಬ್ ಸಾಫ್ಟ್‌ವೇರ್‌ ಪಿಡಿಎಫ್‌, ಅಕ್ರೋಬಾಟ್‌, ಇಲ್ಯುಸ್ಪ್ರೇಟರ್‌, ಪ್ರೀಮಿಯರ್‌ ಪ್ರೋ ಮತ್ತು ಫೋಟೊಶಾಪ್​ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಕೂಡ ಕಂಡುಹಿಡಿದಿದ್ದಾರೆ.

    ಚುಕ್‌ಗೆಶ್ಕೆ 1982ರಲ್ಲಿ ವರ್ನಾಕ್‌ ಅಡೋಬ್‌ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸಿದ್ದರು. 1990ರ ದಶಕದಲ್ಲಿ ಪಿಡಿಎಫ್‌ ಫಾರ್ಮೆಟ್‌ ಅಭಿವೃದ್ಧಿಪಡಿಸಿದ್ದರು. ಅವರ ನಿಧನ ಸಂಸ್ಥೆಗೆ ತುಂಬಲಾರದ ನಷ್ಟ ಎಂದು ಅಡೋಬ್‌ ಸಿಇಒ ಶಂತನು ನಾರಾಯಣ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

    ತಾಯಿಯ ಮೇಲಿನ ಸಿಟ್ಟಿಗೆ ಮೂರು ತಿಂಗಳ ಮಗುವನ್ನು ಜೀವಂತವಾಗಿ ಹೂತುಹಾಕಿದ ಚಿಕ್ಕಮ್ಮ!

    ರಾಜ್ಯದಲ್ಲಿ ನಾಳೆಯಿಂದ ಲಾಕ್​ಡೌನ್​ ಆಗೋದು ನಿಜನಾ? ಸಚಿವ ಸುಧಾಕರ್​ ಏನು ಹೇಳಿದ್ರು ಕೇಳಿ…

    ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್​ ಹಾಕ್ಬೋದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts