More

    ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್​ ಹಾಕ್ಬೋದಾ?

    ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್​ ಹಾಕ್ಬೋದಾ?ಪ್ರಶ್ನೆ: ನಾನು ಮತ್ತು ನನ್ನ ಗಂಡ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಬೇಕೆಂದು ಕೊಂಡಿದ್ದೇವೆ. ನಮಗೆ ಒಬ್ಬನೇ ಮಗ ಇದ್ದಾನೆ. ಅವನು ಆರು ವರ್ಷಗಳಿಂದ ನನ್ನ ಮತ್ತು ನಮ್ಮ ತಂದೆ ತಾಯಿಯ ಜೊತೆಗೇ ಇದ್ದಾನೆ. ಈಗ ನನ್ನ ಗಂಡ, ಒಂದು ವೇಳೆ ನಾನು ಸತ್ತರೆ ನನ್ನ ಮಗ , ಅವರ ಹತ್ತಿರ ಹೋಗಬೇಕು ಎಂದು ಕಂಡೀಷನ್‌ ಹಾಕ ಬೇಕು ಎನ್ನುತ್ತಿದ್ದಾರೆ. ಇದು ಹೇಗೆ ಸಾಧ್ಯ? ಮಗು ಅಜ್ಜ ಅಜ್ಜಿಯನ್ನು ಬಿಟ್ಟು ಹೋಗುವುದಿಲ್ಲ. ಮೇಲಾಗಿ ನನಗೂ ಈಗ ೩೫ ವರ್ಷ ಅಷ್ಟೇ. ಈ ಕಂಡೀಷನ್‌ ಬೇಡ ಎಂದರೆ ಅವರು ಒಪ್ಪುತ್ತಿಲ್ಲ. ಏನು ಮಾಡಬಹುದು ಎಂದು ತಿಳಿಸಿ.

    ಉತ್ತರ: ಆ ಕಂಡೀಷನ್‌ ಇದ್ದರೂ ಇಲ್ಲದಿದ್ದರೂ ಯಾವ ತೊಂದರೆಯೂ ಆಗುವುದಿಲ್ಲ. ಆ ಕಂಡೀಷನ್‌ ಇಲ್ಲದೇ ಹೋದರೂ , ಮಗು ಯಾರ ಹತ್ತಿರ ಇರುತ್ತದೆಯೋ , ಆ ವ್ಯಕ್ತಿ ಸತ್ತು ಹೋದಾಗ ಮತ್ತೊಬ್ಬ ಪೋಷಕರು ಮಗುವಿನ ಕಸ್ಟಡಿ ತನಗೆ ಬೇಕೆಂದು ನ್ಯಾಯಾಲಯವನ್ನು ಕೇಳಬಹುದು. ಆಗ ಏಕಾಏಕಿ ಮಗುವನ್ನು ಅಜ್ಜ ಅಜ್ಜಿಯರಿಂದ ಕಿತ್ತು ತಂದೆ ಅಥವಾ ತಾಯಿಗೆ ನ್ಯಾಯಾಲಯ ಕೊಡುವುದಿಲ್ಲ.

    ಮಗುವಿನ ಹಿತದೃಷ್ಟಿಯಿಂದ ಎಲ್ಲ ಸಂದರ್ಭಗಳನ್ನೂ , ಅನುಕೂಲ ಅನಾನುಕೂಲಗಳನ್ನೂ ಗಮನಿಸಿ ಆ ನಂತರ ಮಗು ಯಾರ ಹತ್ತಿರ ಇರಬೇಕು ಎಂದು ಆದೇಶ ಮಾಡುತ್ತಾರೆ. ಮೇಲಾಗಿ ನಿಮಗೆ ಯಾವ ರೋಗ ರುಜಿನವೂ ಇಲ್ಲದೇ, ಮಧ್ಯ ವಯಸ್ಸಿನಲ್ಲಿ ಇರುವಾಗ ಹೆಚ್ಚಾಗಿ ಚಿಂತಿಸಬೇಕಾಗಿಲ್ಲ. ಮಗುವಿನ ವಿಷಯದಲ್ಲಿ ಯಾವ ಒಪ್ಪಂದವೂ ಕೆಲಸ ಮಾಡುವುದಿಲ್ಲ. ನ್ಯಾಯಾಲಯ ಆದೇಶಗಳನ್ನು ಯಾವಾಗ ಬೇಕಾದರೂ ಮಾರ್ಪಾಟು ಮಾಡಬಹುದು.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಪತ್ನಿಯ ವಾಟ್ಸ್​ಆ್ಯಪ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ದಂಗಾಗಿದ್ದೇನೆ- ವಿಚ್ಛೇದನಕ್ಕೆ ಇದು ಆಧಾರವಾಗಬಹುದಾ?

    ತಾಯಿ, ಅಣ್ಣ ಸೇರಿ ಮೋಸದಿಂದ ಹೊಲ ಮಾರಿದ್ದಾರೆ- ಅಮ್ಮ ತೀರಿಕೊಂಡಿದ್ದಾರೆ: ನನ್ನ ಆಸ್ತಿ ಹೇಗೆ ಪಡೆಯಲಿ?

    ಪತ್ನಿಗೆ ಜೀವನಾಂಶ ನೀಡಬೇಕೆಂದು ಕೋರ್ಟ್‌ ಆದೇಶಿಸಿದ ಮೇಲೂ ದಂಪತಿ ಒಟ್ಟಿಗೇ ಇರಬಹುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts