ಸರ್ಕಾರಿ ಕಚೇರಿಯಲ್ಲೇ ಮಹಿಳೆ ಜತೆ ಸರಸ: ವಿಡಿಯೋ ವೈರಲ್​ ಬೆನ್ನಲ್ಲೇ ರೆವಿನ್ಯೂ ಇನ್ಸ್​ಪೆಕ್ಟರ್ ಅರೆಸ್ಟ್​!

Officer 1
Published on

ಧೆಂಕನಲ್​: ಮಹಿಳೆಯ ಜತೆ ಸರ್ಕಾರಿ ಕಚೇರಿಯಲ್ಲಿಯೇ ಸರಸ ಸಲ್ಲಾಪದಲ್ಲಿ ತೊಡಗಿದ್ದ ಒಡಿಶಾದ ಗಾಡಸಿಲಾ ಪಟ್ಟಣದ ಉಸ್ತುವಾರಿ, ಧೆಂಕನಲ್​ ಜಿಲ್ಲೆಯ ರೆವಿನ್ಯೂ ಇನ್ಸ್​ಪೆಕ್ಟರ್​ನನ್ನು ಬಂಧಿಸಲಾಗಿದೆ.

ತಮ್ಮ ಕಚೇರಿಯಲ್ಲಿ ಮಹಿಳೆಯೊಬ್ಬರ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬೆನ್ನಲ್ಲೇ ಅವರನ್ನು ಅಮಾನತಿನಲ್ಲಿ ಇಡಲಾಗಿದೆ.

ಬಂಧಿತ ಅಧಿಕಾರಿಯನ್ನು ರಂಜನ್​ ಪಾಣಿಗ್ರಹಿ ಎಂದು ಗುರುತಿಸಲಾಗಿದೆ. ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಏಪ್ರಿಲ್​ 11ರಂದು ಧೆಂಕನಕಲ್​ ಜಿಲ್ಲಾಧಿಕಾರಿ ಭೂಮೇಶ್​ ಚಂದ್ರ ಬೆಹೆರಾ ಅವರು ಆರೋಪಿ ಪಾಣಿಗ್ರಹಿಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶ ನೀಡಿದ್ದರು.

ಅಲ್ಲದೆ, ವಿಡಿಯೋ ವೈರಲ್​ ಆದ ಎರಡು ದಿನಗಳ ಬಳಿಕ ವಿಡಿಯೋದಲ್ಲಿದ್ದ ಮಹಿಳೆಯು ಸಹ ಪಾಣಿಗ್ರಹಿ ವಿರುದ್ಧ ದೂರು ದಾಖಲಿಸಿದ್ದಾಳು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಹೆಚ್ಚುವರಿ ರೆವಿನ್ಯೂ ಇನ್ಸ್​ಪೆಕ್ಟರ್​ ಆಗಿದ್ದ ಪಾಣಿಗ್ರಹಿ ಅವರನ್ನು ಕೆಲವು ತಿಂಗಳ ಹಿಂದೆ ಗಾಡಸಿಲಾ ಸರ್ಕಲ್​ ಕಚೇರಿಯ ಉಸ್ತುವರಿಯಾಗಿ ನೇಮಕ ಮಾಡಲಾಗಿತ್ತು. ವೈರಲ್​ ಆಗಿರುವ ಅವರ ವಿಡಿಯೋದಲ್ಲಿ, ಪಾಣಿಗ್ರಹಿ ಅವರ ಕಚೇರಿಯಲ್ಲಿ ಖಾಲಿ ಮದ್ಯದ ಬಾಟೆಲ್​ಗಳಿದ್ದು, ಹೊರಗಿನವರು ಸಹ ಕಚೇರಿಯಲ್ಲಿ ಮಲಗಿರುವ ದೃಶ್ಯವಿದೆ. ಅದರಲ್ಲೂ ಪಾಣಿಗ್ರಹಿ, ಮಹಿಳೆಯೊಬ್ಬಳ ಜತೆ ಕಚೇರಿಯಲ್ಲಿಯೇ ಸಂಧಾನ ಸ್ಥಿತಿಯಲ್ಲಿರುವ ದೃಶ್ಯವು ಸೆರೆಯಾಗಿದೆ.

ವೈರಲ್​ ವಿಡಿಯೋ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಪಾಣಿಗ್ರಹಿ ಅವರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಅಲ್ಲದೆ, ಘಟನೆ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಒಡಪಾದ ತಹಸೀಲ್ದಾರ್​ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ತನಿಖಾ ವರದಿ ಬಂದ ಬಳಿಕ ವರದಿ ಆಧರಿಸಿ ಮತ್ತೊಮ್ಮೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದರು. ಅದರಂತಯೇ ಆರೋಪಿಯನ್ನು ಇದೀಗ ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net