More

    ಈ 3 ಕ್ರಮ ಅನುಸರಿಸಿದ್ರೆ ಕರೊನಾ ವಿರುದ್ಧ ಪರಿಣಾಮಕಾರಿ ಹೋರಾಟ ಸಾಧ್ಯ: ಏಮ್ಸ್​ ಮುಖ್ಯಸ್ಥರ ಸಲಹೆ

    ನವದೆಹಲಿ: ಹೆಚ್ಚುತ್ತಿರುವ ಮಹಾಮಾರಿ ಕರೊನಾ ವೈರಸ್​ ಎರಡನೇ ಅಲೆಯ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಭಾರತದ ಪ್ರಧಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಏಮ್ಸ್​ನ ಮುಖ್ಯಸ್ಥರು ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

    ಕಂಟೈನ್​ಮೆಂಟ್​ ಜೋನ್​ಗಳನ್ನು ಸೃಷ್ಟಿಸುವುದು, ಜನಜಂಗುಳಿಯನ್ನು ನಿಯಂತ್ರಿಸುವುದು ಮತ್ತು ಲಸಿಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಅನುಸರಿಸಿದರೆ ಕರೊನಾ ಎರಡನೇ ಅಲೆಯನ್ನು ತಗ್ಗಿಸಬಹುದೆಂದು ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೆರಿಯಾ ತಿಳಿಸಿದರು.

    ಎರಡನೇ ಅಲೆ ಯಾವಾಗಲೂ ಹೆಚ್ಚು ಅಪಾಯಕಾರಿ ಆಗಿರುತ್ತದೆ. ನಾವು ಹೆಚ್ಚು ಜಾಗೃತರಾಗಿರಬೇಕು. ಜಗತ್ತಿನಲ್ಲಿ ಪ್ರಸಾರವಾಗುವ ವೈರಸ್​ ರೂಪಾಂತರಗಳಿವೆ ಎಂದು ನಮಗೆ ಮೊದಲೇ ತಿಳಿದಿತ್ತು. ಭಾರತದಲ್ಲಿ ಹೊಸ ತಳಿಗಳು ಕಂಡುಬರುವವರೆಗೂ ಕೇವಲ ಸಮಯದ ವಿಷಯವಾಗಿತ್ತು. ಇದೀಗ ಅದರೊಂದಿಗೆ ಹೋರಾಡಲೇ ಬೇಕಿದೆ ಎಂದಿದ್ದಾರೆ.

    ಇದನ್ನೂ ಓದಿರಿ: VIDEO| ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಡೈನೋಸಾರ್ ರೀತಿಯ ಜೀವಿ: ಬೆಚ್ಚಿಬೀಳಿಸೋ ವಿಡಿಯೋ ಇದು! ​

    ನಾವು 3 ರಿಂದ 4 ಕೆಲಸಗಳನ್ನು ಮಾಡಬೇಕಾಗಿದೆ. ಸೋಂಕು ಹರಡುವುದನ್ನು ನಾವು ನಿಲ್ಲಿಸಬೇಕಿದೆ. ಹೀಗಾಗಿ ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ಚಿಕಿತ್ಸೆಯೊಂದಿಗೆ ಕಟ್ಟುನಿಟ್ಟಾದ ಕಂಟೈನ್​ಮೆಂಟ್​ ವಲಯ ರಚಿಸಬೇಕು. ಎರಡನೆಯದಾಗಿ, ನಾವು ಜನಸಂದಣಿಯನ್ನು ನಿಷೇಧಿಸಬೇಕು. ಮೂರನೆಯದಾಗಿ ನಾವು ಲಸಿಕೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು. ನಾವು ಈ ಹಿಂದೆ ದೇಶವನ್ನು ಕೆಂಪು, ಹಸಿರು, ಕಿತ್ತಳೆ ವಲಯಗಳಾಗಿ ಹೇಗೆ ವಿಂಗಡಿಸಿದ್ದೇವೆ, ನಾವು ಅದನ್ನು ಮತ್ತೆ ಮಾಡಬೇಕೆಂದರು. (ಏಜೆನ್ಸೀಸ್​)

    VIDEO| ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಡೈನೋಸಾರ್ ರೀತಿಯ ಜೀವಿ: ಬೆಚ್ಚಿಬೀಳಿಸೋ ವಿಡಿಯೋ ಇದು! ​

    ಕೊನೆಗೂ ಈ ಚಿತ್ರಗಳಲ್ಲಿ ರಾಜ್ ನಟಿಸಲೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts