ಹೋಳಿ ನೃತ್ಯ ವಿಚಾರದಲ್ಲಿ ಯುವಕನಿಗೆ ಹಲ್ಲೆ

Assault
Published on

ಗಂಗೊಳ್ಳಿ: ಹೋಳಿ ಹಬ್ಬದ ನೃತ್ಯ ಮಾಡುವ ವಿಚಾರದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಗಂಗೊಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಗಂಗೊಳ್ಳಿ ಗ್ರಾಮ ಬೇಲಿಕೇರಿ ನಿವಾಸಿ ಪ್ರಶಾಂತ ಎಂಬುವರು ನೆರೆಮನೆಯವರ ಜತೆ ಹೋಳಿ ಹಬ್ಬದ ಪ್ರಯುಕ್ತ ನೃತ್ಯ ಮಾಡುತ್ತಿದ್ದರು. ಇದೇ ಸಂದರ್ಭ ರೋಶನ್ ಮತ್ತು ಚರಣ್ ಎಂಬುವರು ಕುಣಿಯುವ ಸ್ಥಳಕ್ಕೆ ಬಂದಾಗ, ಪ್ರಶಾಂತ್ ಅವರು ಅಲ್ಲಿಗೆ ಬಂದಿದ್ದಕ್ಕೆ ಆಕ್ಷೇಪಿಸಿದ್ದರು.

ಸಂಜೆ ಗಂಗೊಳ್ಳಿ ಪೋರ್ಟ್ ಆಫೀಸ್ ಬಳಿಯಿಂದ ಹೊರಡುವ ಹೋಳಿ ಮೆರವಣಿಗೆ ಸೇರಿಕೊಳ್ಳಲು ಪ್ರಶಾಂತ್ ನಡೆದುಕೊಂಡು ಹೋಗುತ್ತಿರುವಾಗ ರೋಶನ್, ಕಾರ್ತಿಕ್ ಪಟೇಲ್, ಚರಣ್, ಅಂಕಿತ್, ವಿಷ್ಣು, ಕಿರಣ್ ಮತ್ತು ಇತರರು ಪ್ರಶಾಂತ್ ಅವರನ್ನು ಅಡ್ಡಗಟ್ಟಿ ನಿಲ್ಲಿಸಿ ಬೇಲಿಕೇರಿಯಲ್ಲಿ ಕುಣಿಯಲು ಯಾಕೆ ಬಿಡಲಿಲ್ಲ ಎಂದು ಅವರ ಮೇಲೆ ಮುಗಿ ಬಿದ್ದು ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಪ್ರಶಾಂತ್ ಚಿಕಿತ್ಸೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net