More

    ಬಣ್ಣದ ಹಬ್ಬಕ್ಕೆ ತೆರೆ: ಗೆಜ್ಜೆ ಕಳಚುವ ಮೂಲಕ ಆಚರಣೆ ಸಮಾಪ್ತಿಗೊಳಿಸಿದ ಕುಡುಬಿ ಬಾಂಧವರು

    ವಿಜಯವಾಣಿ ಸುದ್ದಿಜಾಲ ಆರ್ಡಿ
    ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಕುಡುಬಿ ಸಮುದಾಯದವರು ನಡೆಸುತ್ತಿದ್ದ ಸಂಭ್ರಮದ ಹೋಳಿ ಆಚರಣೆಗೆ ಸೋಮವಾರ ತೆರೆಬಿದ್ದಿದೆ.
    ಉಡುಪಿ ಜಿಲ್ಲೆಯಲ್ಲಿ 46 ಹೋಳಿ ಕೂಡುಕಟ್ಟುಗಳು ಇದ್ದು, ಈ ಪೈಕಿ 41 ಕೂಡುಕಟ್ಟುಗಳ 3403 ವೇಷಧಾರಿಗಳಾಗಿ ಹೋಳಿ ಹಬ್ಬ ಆಚರಿಸಿಕೊಂಡಿದ್ದಾರೆ. ಜತೆಗೆ ಕೊಕ್ಕರ್ಣೆ ಒಳಬೈಲು ಕೂಡುಕಟ್ಟಿನಲ್ಲಿ ಸುಮಾರು 251ಕ್ಕೂ ಹೆಚ್ಚು ವೇಷಧಾರಿಗಳು ಭಾಗವಹಿಸಿದ್ದಾರೆ.

    ಬಣ್ಣದ ಹಬ್ಬಕ್ಕೆ ತೆರೆ: ಗೆಜ್ಜೆ ಕಳಚುವ ಮೂಲಕ ಆಚರಣೆ ಸಮಾಪ್ತಿಗೊಳಿಸಿದ ಕುಡುಬಿ ಬಾಂಧವರು

    ಬಣ್ಣದ ಹಬ್ಬಕ್ಕೆ ತೆರೆ

    ಏಕಾದಶಿ ದಿನದಂದು ಗುಮ್ಮಟೆ ವೇಷ ಧರಿಸಿ ಗುರಿಕಾರ ಮನೆಯಿಂದ ಹೊರಡುವ ಮೂಲಕ ಹಬ್ಬ ಆರಂಭಗೊಂಡಿದ್ದು, ಹುಣ್ಣಿಮೆ ದಿನವಾದ ಸೋಮವಾರ ಗುರಿಕಾರರ ಮನೆಗೆ ಹಿಂದಿರುಗಿ ಗೆಜ್ಜೆ ಕಳಚುವ ಮೂಲಕ ಹಬ್ಬದಾಚರಣೆಗೆ ತೆರೆ ಎಳೆಯಲಾಗಿದೆ.

    ಬಣ್ಣದ ಹಬ್ಬಕ್ಕೆ ತೆರೆ: ಗೆಜ್ಜೆ ಕಳಚುವ ಮೂಲಕ ಆಚರಣೆ ಸಮಾಪ್ತಿಗೊಳಿಸಿದ ಕುಡುಬಿ ಬಾಂಧವರು
    ಬಣ್ಣದ ಹಬ್ಬಕ್ಕೆ ತೆರೆ: ಗೆಜ್ಜೆ ಕಳಚುವ ಮೂಲಕ ಆಚರಣೆ ಸಮಾಪ್ತಿಗೊಳಿಸಿದ ಕುಡುಬಿ ಬಾಂಧವರು

    ಸಾಮೂಹಿಕ ಭೋಜನ

    ಹೋಳಿ ಹಬ್ಬದ ಮುಕ್ತಾಯದ ಹಿನ್ನೆಲೆಯಲ್ಲಿ ಪರಿಕರಗಳಿಗೆ ಪೂಜೆ ನಡೆಸುವುದರ ಜತೆಗೆ ಸಾಮೂಹಿಕ ಭೋಜನ ಆಯೋಜಿಸಲಾಯಿತು. ಕಾಮದಹನದ ಬಳಿಕ ವಿವಿಧ ಆಟೋಟಗಳು ನಡೆದಿದ್ದು, ಈ ವೇಳೆ ಸಂಗ್ರಹವಾದ ದವಸಧಾನ್ಯಗಳನ್ನು ಹಂಚಿಕೊಳ್ಳಲಾಯಿತು.
    ಕಿರಿಯರು ಹಬ್ಬ ಮುಕ್ತಾಯಗೊಂಡಿರುವ ಕುರಿತು ಊರಿನಾದ್ಯಂತ ಅಂಗಾರ್ ಅಂಗಿ, ಬೋಡ್ಕಾರ್ ಟೊಪ್ಪಿ ಪುಲ್‌ಲ್ ಪೋಡ್ ಅಬೋಸ್ ಎಂದು ಘೋಷಣೆ ಕೂಗುತ್ತಾ ಜನರಿಗೆ ಬಣ್ಣ ಎರಚಿದರು.

    ಬಣ್ಣದ ಹಬ್ಬಕ್ಕೆ ತೆರೆ: ಗೆಜ್ಜೆ ಕಳಚುವ ಮೂಲಕ ಆಚರಣೆ ಸಮಾಪ್ತಿಗೊಳಿಸಿದ ಕುಡುಬಿ ಬಾಂಧವರು

    ಹೋಳಿ ಆಚರಿಸಿದ ಯೋಧರು

    ಈ ಬಾರಿಯ ಹೋಳಿ ಆಚರಣೆಯಲ್ಲಿ ಯೋಧರಾದ ಅಲ್ಬಾಡಿ ಕೂಸಿನತೋಟ ಕೂಡುಕಟ್ಟಿನ ಸುರೇಂದ್ರ ನಾಯ್ಕ ಹಾಗೂ ಕಲ್ಮರ್ಗಿ ಕೂಡುಕಟ್ಟಿನ ದಿವಾಕರ ನಾಯ್ಕ ಭಾಗವಹಿಸಿದ್ದು ವಿಶೇಷವಾಗಿತ್ತು. ಜತೆಗೆ ರಾಷ್ಟ್ರೀಯ ಕ್ರೀಡಾಪಟು ಕೋಟಂಬೈಲು ಕೂಡುಕಟ್ಟಿನ ಸಂದೀಪ ನಾಯ್ಕ, ಹೆದ್ದಾರಿ ಇಲಾಖೆಯ ಅಭಿಯಂತರ ಸೆಟ್ಟೋಳಿ ಕೂಡುಕಟ್ಟಿನ ಮಹಾಬಲ ನಾಯ್ಕ ಕೂಡ ಹೋಳಿ ಆಚರಿಸಿ ಸಂಭ್ರಮಿಸಿದರು.

    ಯುವ ಜನತೆಯಲ್ಲಿ ಹೋಳಿ ಆಚರಣೆಯ ಪದ್ಧತಿ ಹಾಗೂ ಹೆಚ್ಚಿನ ಅಸಕ್ತಿ ಮೂಡಿಸುವಲ್ಲಿ ಎಲ್ಲ ಕೂಡುಕಟ್ಟುಗಳ ಗುರಿಕಾರರ ಹಾಗೂ ಹಿರಿಯರಿಂದ ಸೂಕ್ತ ಮಾಹಿತಿಗಳನ್ನು ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಕೈಪಿಡಿ ರಚಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ತೀರಾ ಹಿಂದುಳಿದ ಕುಡುಬಿ ಸಮುದಾಯದ ಹೋಳಿ ಆಚರಣೆಯ ಕಲಾವಿದರಿಗೆ ಮಾಸಾಶನ, ಧಾರ್ಮಿಕ ಸಂಸ್ಕೃತಿಕತೆಯನ್ನು ಉಳಿಸಿ ಬೆಳೆಸಲು ಹೋಳಿ ಆಚರಣೆ ಮಾಡುವ ಗುರಿಕಾರರ ಮನೆಗೆ ಶಾಶ್ವತ ಸಭಾಭವನ ನಿರ್ಮಾಣವಾಗಬೇಕು.
    -ವೈ.ಸುರೇಂದ್ರ ನಾಯ್ಕ ಯಳಂತೂರು, ಅಧ್ಯಕ್ಷ, ಕುಡುಬಿ ಹೋಳಿ ಕೂಡುಕಟ್ಟುಗಳ ಒಕ್ಕೂಟ, ಉಡುಪಿ ಜಿಲ್ಲೆ.

    ಭಾರತೀಯ ಸಂಸ್ಕೃತಿ, ಆಚರಣೆ, ಪರಂಪರೆಯನ್ನು ಆಧುನಿಕ ಜನಜೀವನದಲ್ಲೂ ಕುಡುಬಿ ಜನಾಂಗವು ಉಳಿಸಿಕೊಂಡು ಬಂದಿದೆ. ಉಡುಪಿ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಆಚರಣೆಯಲ್ಲಿ ವಿದ್ಯಾರ್ಥಿಗಳು ಸಹ ಪಾಲ್ಗೋಳ್ಳುತ್ತಿದ್ದಾರೆ. ಈ ಬಾರಿ ಹಬ್ಬದ ಜತೆಯಲ್ಲೇ ಪರೀಕ್ಷೆಗಳು ನಡೆಯಲಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೇಗನೆ ಹೋಳಿ ಹಬ್ಬದ ಆಚರಣೆ ಮುಕ್ತಾಯಗೊಳಿಸಲಾಗಿದೆ.
    -ನಾರಾಯಣ ನಾಯ್ಕ, ಶಿಕ್ಷಕ,ಗೋಳಿಯಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts