More

    ಮತಯಂತ್ರದೊಂದಿಗೆ ಮತಗಟ್ಟೆ ತಲುಪಿದ ಸಿಬ್ಬಂದಿ

    ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾಹಿತಿ — ವಾರ್​ ರೂಮ್​ಗೆ ಬರಲಿದೆ ಕ್ಷಣಕ್ಷಣದ ಸಂದೇಶ

    ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರತಿಯೊಂದು ಮತದಾನ ಕೇಂದ್ರದ ಪ್ರತಿಕ್ಷಣದ ಮಾಹಿತಿ ಪಡೆಯಲಾಗುತ್ತಿದ್ದು, ಗುರುವಾರ ಸಂಜೆ 7 ಗಂಟೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತಯಂತ್ರ ಹಾಗೂ ಪರಿಕರಗಳೊಂದಿಗೆ ಸುರಕ್ಷಿತವಾಗಿ ತಲುಪಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದ್ದಾರೆ.

    ಉಡುಪಿಯ ಡಿಸಿ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ಚುನಾವಣಾ ಕುರಿತ ಮಾಹಿತಿ ಸಂಗ್ರಹಣೆಗೆ ಗುರುವಾರ ಸ್ಥಾಪಿಸಿರುವ ವಾರ್​ ರೂಮ್​ನಲ್ಲಿ ಮಾತನಾಡಿ, 1842 ಮತದಾನ ಕೇಂದ್ರದಲ್ಲಿ ಈಗಾಗಲೇ ಎಲ್ಲರು ಮೊಕ್ಕಾಂ ಹೂಡಿದ್ದು, ಶುಕ್ರವಾರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನಕ್ಕೆ ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ ಎಂದರು.

    2 ಗಂಟೆಗೊಮ್ಮೆ ಮಾಹಿತಿ

    ಮತದಾನ ಕೇಂದ್ರಗಳಲ್ಲಿ ಮತಯಂತ್ರಗಳ ನ್ಯೂನತೆ, ಮತದಾನ ಕೇಂದ್ರಗಳ ಬಳಿ ಕಾನೂನು ಸುವ್ಯವಸ್ಥೆಗೆ ತೊಂದರೆ ಉಂಟಾದಲ್ಲಿ ಕ್ಷಣದಲ್ಲಿಯೇ ವಾರ್​ ರೂಮ್​ಗೆ ಮಾಹಿತಿ ಲಭ್ಯವಾಗುತ್ತದೆ. ಹೀಗಾಗಿ ಅಗತ್ಯ ನೆರವು ನೀಡಲು ಕ್ರಮ ವಹಿಸಿ, ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುವು ಮಾಡಕೊಡಲಾಗುವುದು. ಎಲ್ಲ ಮತದಾನ ಕೇಂದ್ರದಿಂದ ಪ್ರತಿ ಎರಡು ಗಂಟೆಗೊಮ್ಮೆ ಆಗಿರುವ ಶೇಕಡವಾರು ಮತದಾನದ ಮಾಹಿತಿ ಪಡೆಯಲಾಗುವುದು. ಆ ವಿವರವನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಲು ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದರು.

    ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್​ ನಾಯಕ್​, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್​, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ., ಜಿಲ್ಲಾಧಿಕಾರಿ ಕಚೇರಿಯ ವಾರ್​ ರೂಮ್​ ಸಿಬ್ಬಂದಿ ಇದ್ದರು.

    ಜಿಲ್ಲಾ ಮಟ್ಟದ ತಂಡ ರಚನೆ

    ಮತದಾನ ಕೇಂದ್ರಗಳ ವೆಬ್​ಕಾಸ್ಟಿಂಗ್​ ವೀಕ್ಷಿಸಲು, ವಾಹನಗಳ ಜಿಪಿಎಸ್​ ಟ್ರ್ರಾಕಿಂಗ್​ ವ್ಯವಸ್ಥೆ ವೀಕ್ಷಿಸಲು, ಇವಿಎಂಗಳ ಸಮಸ್ಯೆ ಉಂಟಾದಲ್ಲಿ ಬಗೆಹರಿಸಲು ಜಿಲ್ಲಾ ಮಟ್ಟದ ತಂಡ ರಚಿಸಲಾಗಿದೆ. ಈ ತಂಡಗಳು ಬೆಳಗ್ಗೆ 5:30ರಿಂದ ಸಂಜೆ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಾರ್ಯನಿರ್ವಹಿಸಲಿವೆ. ಉಡುಪಿ ಜಿಲ್ಲೆಯಲ್ಲಿ 866 ಮತದಾನ ಕೇಂದ್ರಗಳಿದ್ದು, ಅವುಗಳಲ್ಲಿ 791 ಮತಗಟ್ಟೆ ಕೇಂದ್ರಗಳಿಗೆ ವೆಬ್​ಕಾಸ್ಟಿಂಗ್​ ಅಳವಡಿಸಿದ್ದು, ಈ ಮತಗಟ್ಟೆಗಳಲ್ಲಿ ನಡೆಯುವ ಪ್ರತಿಯೊಂದು ಕ್ಷಣವನ್ನೂ ನೇರವಾಗಿ ವಾರ್​ರೂಮಿನಿಂದ ವೀಕ್ಷಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts