More

    ಪ್ರಭಾರ ವ್ಯವಸ್ಥಾಪಕಿ ಆತ್ಮಹತ್ಯೆ, ಪತಿಯಿಂದ ದೂರು: ಸಿಬ್ಬಂದಿ ಕಿರುಕುಳದಿಂದ ಆತ್ಮಹತ್ಯೆ ಎಂದು ಆರೋಪ

    ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
    ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಪ್ರಭಾರ ವ್ಯವಸ್ಥಾಪಕಿಯಾಗಿದ್ದ ಆಶಾ ಎಸ್(52) ಆತ್ಮಹತ್ಯೆಗೆ ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ರಾವ್, ಸಿಬ್ಬಂದಿ ಮಂಜುನಾಥ ಮತ್ತು ವಲಯ ಮೇಲ್ವಿಚಾರಕ ಉದಯಕುಮಾರ ಶೆಟ್ಟಿ ಅವರ ಪ್ರೇರಣೆ ಕಾರಣ ಎಂದು ಆಶಾ ಅವರ ಪತಿ ವಿಜಯ್ ಮಾ.25ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆಶಾ ಮಾ.20ರಂದು ಮಧ್ಯಾಹ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಿಬ್ಬಂದಿ ಕಿರುಕುಳ ಆರೋಪ

    ಆಶಾ ಅವರಿಗೆ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಿಬ್ಬಂದಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆಶಾ ಅವರು ಮನೆಯಲ್ಲಿ ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ವಿಚಾರಿಸಿದಾಗ ಮಹೇಶ್ ರಾವ್, ಮಂಜುನಾಥ, ಉದಯಕುಮಾರ ಶೆಟ್ಟಿ ಸಂಘದಲ್ಲಿ ನಡೆದ ವಂಚನೆ ಒಪ್ಪಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ಬ್ಯಾಂಕಿನ ಹಣವನ್ನು ವಂಚನೆ ಮಾಡಿದ್ದಿ. ಅದನ್ನು ವಾಪಾಸ್ಸು ಕೊಡು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳು ಎಂದು ಕಿರುಕುಳ ನೀಡುತ್ತಿದ್ದರು. ಮಾ.20ರಂದು ಬೆಳಗ್ಗೆ 11.30ರ ಸಮಯದಲ್ಲಿ ಆಶಾ ಮನೆಗೆ ಬಂದಿದ್ದರು. ಆಶಾ ಅವರ ತಾಯಿ ಕೂಡ ಮನೆಯಲ್ಲಿ ಇದ್ದರು. 11.50ರ ಸಮಯದಲ್ಲಿ ಮಹೇಶ್ ರಾವ್, ಮಂಜುನಾಥ, ಉದಯಕುಮಾರ ಶೆಟ್ಟಿ ಕಾರಿನಲ್ಲಿ ಮನೆಗೆ ಬಂದು ಆವಾಚ್ಯವಾಗಿ ಬೈದು ಮನೆಯ ಒಳಗೆ ಆಕ್ರಮವಾಗಿ ಪ್ರವೇಶ ಮಾಡಿ, ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ. ಆಶಾ ಅವರು ಮನೆಯ ಮಹಡಿ ಕೋಣೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಜಯ್ ಶಂಕರನಾರಾಯಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆಶಾ ಸುಮಾರು 28 ವರ್ಷ ಸೊಸೈಟಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ಪ್ರಭಾರ ವ್ಯವಸ್ಥಾಪಕಿ ಹುದ್ದೆಗೇರಿದ್ದರು.

    ಇಬ್ಬರು ಸಿಬ್ಬಂದಿ ಆತ್ಮಹತ್ಯೆ

    ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಶಾಖಾ ವ್ಯವಸ್ಥಾಪಕರಾಗಿದ್ದ ಸಂಪತ್ ಕಾಮತ್ 2 ವರ್ಷದ ಹಿಂದೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಆಶಾ ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಗಳು ನಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts