More

    ಉಡುಪಿ ಸ್ವೀಪ್​ ಸಮಿತಿ ಪ್ರಚಾರ ಸಾಮಗ್ರಿ ಬಿಡುಗಡೆ

    ಉಡುಪಿ: ಲೋಕಸಭೆಗೆ ಏ.26ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಮತದಾರರು ತಪ್ಪದೇ ಮತದಾನ ಕೇಂದ್ರಕ್ಕೆ ತೆರಳಿ ಅಮೂಲ್ಯವಾದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.

    ಉಡುಪಿಯ ಜಿಲ್ಲಾ ಪಂಚಾಯಿತಿಯ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಸ್ವೀಪ್​ ಸಮಿತಿ ಸಭೆಯಲ್ಲಿ “ಚುನಾವಣಾ ಪರ್ವ&ದೇಶದ ಗರ್ವ’ ಎಂಬ ಘೋಷಣೆಯಿರುವ ವಿವಿಧ ಪೋಸ್ಟರ್ಸ್​, ಬ್ಯಾನರ್ಸ್​ ಹಾಗೂ ಚುನಾವಣಾ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿದರು.

    ಚುನಾವಣಾ ಹಬ್ಬ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯೂ ಸಹ ಹಬ್ಬದ ರೀತಿಯಲ್ಲೇ ಇರುತ್ತದೆ. ಹೀಗಾಗಿ ಪ್ರತಿ ಮತದಾರ ತಾನೇಕೆ ಮತದಾನ ಮಾಡಬೇಕೆಂಬ ಪ್ರಾಮುಖ್ಯ ತಿಳಿದು ಕಡ್ಡಾಯವಾಗಿ ಹಕ್ಕು ಚಲಾಯಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದರು.

    ಆಮಿಷ ಬೇಡ: ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಯುವ ಸಮುದಾಯ ಸೇರಿದಂತೆ ಎಲ್ಲ ಮತದಾರರಿಗೆ ಚುನಾವಣಾ ಸಾಕ್ಷರತೆ ಮೂಡಿಸಬೇಕು. ಮತದಾರರು ಆಸೆ, ಆಮಿಷಕ್ಕೆ ಒಳಗಾಗದೇ ಸ್ವಯಂ ರ್ನಿಣಯದಿಂದ ಅತ್ಯುತ್ತಮ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

    ವಿಭಿನ್ನ ಚಟುವಟಿಕೆ ಆಯೋಜಿಸಿ
    ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುವಂತಾಗಲು ಇಲಾಖೆಗಳ ವತಿಯಿಂದ ವಿಭಿನ್ನ ರೀತಿಯಲ್ಲಿ ಸ್ವೀಪ್​ ಚಟುವಟಿಕೆ ಆಯೋಜಿಸಬೇಕು. ಸಾರ್ವಜನಿಕ ಸ್ಥಳ, ಪ್ರವಾಸಿ&ಧಾರ್ಮಿಕ ತಾಣಗಳಲ್ಲಿ ಮತದಾನದ ಅರಿವು ಕುರಿತು ಹೆಚ್ಚು ಕಾರ್ಯಕ್ರಮ ನಡೆಸಬೇಕು. ಜಿಲ್ಲೆಯ 18 ವರ್ಷ ಮೇಲ್ಪಟ್ಟ ಎಪಿಕ್​ ಕಾರ್ಡ್​ ಹೊಂದಿರುವ ಎಲ್ಲರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಬೇಕು. ತನ್ಮೂಲಕ ಸಂವಿಧಾನ ನೀಡಿರುವ ಹಕ್ಕು ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು. ಕಳೆದ ಬಾರಿ ಶೇಕಡವಾರು ಕಡಿಮೆ ಮತದಾನದ ಆಗಿರುವ ಸ್ಥಳಗಳಲ್ಲಿ ಪ್ರಮಾಣ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಗವಿಕಲರು ಹಾಗೂ ಹಿರಿಯರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರಿಗೆ ಮತದಾನದ ಕುರಿತಾಗಿ ಅರಿವು ಮೂಡುವಂತಾಗಲು ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಇಲಾಖಾ ಅಧಿಕಾರಿಗಳಿಗೆ ಡಿಸಿ ವಿದ್ಯಾಕುಮಾರಿ ಸಲಹೆ ನೀಡಿದರು.

    ಜಿಪಂ ಸಿಇಒ ಹಾಗೂ ಸ್ವೀಪ್​ ಸಮಿತಿ ಅಧ್ಯಕ್ಷ ಪ್ರತಿಕ್​ ಬಾಯಲ್​, ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್​, ಜಿಪಂ ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts