VIDEO| ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್​ ಮಾಡಲು ಹೋದವರಿಗೆ ಟಕ್ಕರ್​ ಕೊಟ್ಟ ಪೊಲೀಸ್​

Dharwad Police
Published on

ಧಾರವಾಡ: ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್​ ಮಾಡಲು ಹೋಗಿ ಯುವಕರ ಗುಂಪೊಂದು ಪೊಲೀಸರ ಅತಿಥಿಯಾಗಿರಯವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಧಾರವಾಡ ನಗರದ ಪ್ರತಿಷ್ಠಿತ ಕಾಲೇಜೊಂದರ ಬಳಿ ಯುವಕನೋರ್ವ ವಿದ್ಯಾರ್ಥಿನಿಯರನ್ನು ಬೈಕಿನಲ್ಲಿ ಹಿಂಬಾಲಿಸಿ ವಿಚಿತ್ರ ಧ್ವನಿಯ ಮೂಲಕ ಅವರನ್ನು ಹೆದರಿಸಿದ್ದ. ಈ ಕೃತ್ಯವನ್ನು ಆತನ ಸ್ನೇಹಿತರು ಮೊಬೈಲ್​ ಫೋನಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಿದ್ದರು.

ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಸಂಬಂಧ ಧಾರವಾಡ ನಗರ ಪೊಲೀಸರು ಯುವಕರ ವಿರುದ್ಧ ಕ್ರಮ ಜರುಗಿಸಿದ್ದು, ಸೋಶಿಯಲ್​ ಮೀಡಿಯಾ ಶೋಕಿಗೆ ಅವರದ್ದೇ ರೀತಿಯಲ್ಲಿ ಟಕ್ಕರ್​ ಕೊಟ್ಟಿದ್ದಾರೆ.

ಘಟನೆ ಸಂಬಂಧ ಪೊಲೀಸರು ಮೂವರು ಯುವಕರು ಹಾಗೂ ಗಾಡಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣವನ್ನು ದಾಖಲಿಸಿದ್ದಾರೆ.ಈ ಕುರಿತು ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ಪೊಲೀಸರು BEFORE, AFTER ಎಫೆಕ್ಟ್ ಹಾಕಿ ಈ ರೀತಿ ಮಾಡುವ ಪುಂಡರನ್ನು ಸುಮ್ಮನೆ ಬಿಡುವ ಮಾತಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net