More

    ಆನ್​ಲೈನ್​ ಗ್ಯಾಂಬ್ಲಿಂಗ್​ನಲ್ಲಿ 58 ಕೋಟಿ ರೂ. ಕಳೆದುಕೊಂಡ ಉದ್ಯಮಿ

    ನಾಗ್ಪುರ: ನಾವು ಪ್ರತಿನಿತ್ಯ ಸೈಬರ್​ ಕ್ರೈಂ/ವಂಚನೆಗಳ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಇದರ ಹೊರತ್ತಾಗಿಯೂ ಜನ ಮೋಸ ಹೋಗಿರುವುದನ್ನು ನಾವು ಕೇಳಿರುತ್ತೇವೆ.

    ಇದೀಗ ಪ್ರಕರಣ ಒಂದರಲ್ಲಿ ಉದ್ಯಮಿಯೊಬ್ಬರು ಆನ್​ಲೈನ್​ ಗ್ಯಾಂಬ್ಲಿಂಗ್​​ ಗೀಳಿಗೆ ಬಿದ್ದು 58 ಕೋಟಿ ರೂಪಾಯಿ ಹಣ, ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

    ಪ್ರಕರಣ ಸಂಬಂಧ ಕಿಂಗ್​ಪಿನ್​ ಅನಂತ್​ ಅಲಿಯಾಸ್​ ಸೊಂತು ನವರತನ್​ ಜೈನ ಎಂಬುವವನ ವಿರುದ್ದ ಉದ್ಯಮಿ ದೂರು ನೀಡಿದ್ದು, ಈತ ಘಟನೆ ಬೆಳಕಿಗೆ ಬರುತ್ತಿದ್ದಂತೆ ದುಬೈಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗ್ಯಾಂಬ್ಲಿಂಗ್​ ಆಡುವಂತೆ ದುಂಬಾಲು

    ಈ ಕುರಿತು ಪ್ರತಿಕ್ರಿಯಿಸಿರುವ ನಾಗ್ಪುರ ಪೊಲೀಸ್​ ಕಮಿಷನರ್​ ಅಮಿತೇಶ್​ ಕುಮಾರ್​ ಮೇಲ್ನೋಟಕ್ಕೆ ನೋಡುವುದಾದರೆ ಪ್ರಕರಣದ ಕಿಂಗ್ಪಿನ್​ ಅನಂತ್​ ಉದ್ಯಮಿಯೊಬ್ಬರಿಗೆ ಆನ್​ಲೈನ್​ ಗ್ಯಾಂಬ್ಲಿಂಗ್​ ಲಾಭದಾಯಕವಾಗಿದ್ದು ಇದರಲ್ಲಿ ಒಮ್ಮೆ ಹೂಡಿಕೆ ಮಾಡಿ ಆಡುವಂತೆ ಹೇಳಿದ್ದಾನೆ. ಬಳಿಕ 8 ಲಕ್ಷ ರೂಪಾಯಿ ಹಣ ಪಡೆದು ವಾಟ್ಸ್​ಅಪ್​ನಲ್ಲಿ ಲಿಂಕ್​ ಒಂದನ್ನು ಕಳುಹಿಸಿದ್ದಾನೆ.

    Seized Money
    ವಶಪಡಿಸಿಕೊಳ್ಳಲಾದ ಹಣ

    ಇದನ್ನೂ ಓದಿ: ಹಾರ್ನ್​ ಮಾಡಿದ್ದಕ್ಕೆ ಆಟೋ ಚಾಲಕನ ಹತ್ಯೆ

    ಲಿಂಕ್​ ಓಪನ್​ ಮಾಡಿದ ಬಳಿಕ ಆನ್​ಲೈನ್​ ಗ್ಯಾಂಬ್ಲಿಂಗ್​ ಅಕೌಂಟ್​ನಲ್ಲಿ 8 ಲಕ್ಷ ರೂಪಾಯಿ ಜಮೆಯಾಗಿರುವುದಾಗಿ ತೋರಿಸಿದೆ. ಬಳಿಕ ಉದ್ಯಮಿ ಗೇಮ್​ ಆಡಲು ಶುರು ಮಾಡಿದ್ದು, 5 ಕೋಟಿ ರೂಪಾಯಿ ಹಣವನ್ನು ಗೆದ್ದಿದ್ದಾರೆ. ಇದಾದ ಕೆಲ ಹೊತ್ತಿನ ಬಳಿಕ 58 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

    ದುಬೈಗೆ ಪರಾರಿ

    ಈ ಬಗ್ಗೆ ಆರೋಪಿ ಜೈನ್​ಗೆ ವಿಚಾರಿಸಿ ತನ್ನ ಹಣವನ್ನು ಹಿಂತಿರುಗಿಸುವಂತೆ ಉದ್ಯಮಿ ಕೇಳಿದಾಗ ಆತ ನಿರಾಕರಿಸಿದ್ದಾನೆ. ಇದರಿಂದ ಅನುಮಾನಗೊಂಡ ಉದ್ಯಮಿಯೂ ಪೊಲೀಸರಿಗೆ ದೂರು ದಾಖಲಿಸಿ ತಮಗಾದ ಬಗ್ಗೆ ಹೇಳಿಕೊಂಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಆರೋಪಿ ಅನಂತ್​ ಮನೆ ಮೇಲೆ ದಾಳಿ ಮಾಡಿ ಕೋಟಿಗಟ್ಟಲ್ಲೇ ಹಣ, 4 ಕೆಜಿ ಚಿನ್ನದ ಬಿಸ್ಕೆಟ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ದುಬೈಗೆ ಪರಾರಿಯಾಗಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ನಾಗ್ಪುರ ಪೊಲೀಸ್​ ಕಮಿಷನರ್​ ಅಮಿತೇಶ್​ ಕುಮಾರ್ ತಿಳಿಸಿದ್ದಾರೆ. ‘

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts