'ಆಧುನಿಕ ಯುಗದ ಗ್ರಾಫಿಕ್‌ಗೆ ಬಲಿಪಶು ಆಗುವ ಭಯ ನಮಗೆ ಕಾಡುತ್ತಿದೆ'

CD Scandal 1
Published on

ಮೈಸೂರು: ಆಧುನಿಕ ಯುಗದ ಗ್ರಾಫಿಕ್‌ಗೆ ಬಲಿಪಶು ಆಗುವ ಭಯ ನಮಗೆ ಕಾಡುತ್ತಿದೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದು ಗ್ರಾಫಿಕ್ ಯುಗ. ಅದಕ್ಕಾಗಿ ಮಾನ ಮರ್ಯಾದೆಗೆ ಅಂಜಿದ್ದೇವೆ. ಗ್ರಾಫಿಕ್ ಮೂಲಕ ಕೈ ಕಾಲು ತಲೆ ಕತ್ತರಿಸಿದಂತೆ ಮಾಡಬಹುದು. ಸಿನಿಮಾದಿಂದ ಬಂದ ನನಗೆ ಅದೆಲ್ಲ ಗೊತ್ತಿದೆ ಎಂದು ಹೇಳಿದರು.

ಮಾನ ಮರ್ಯಾದೆ ಗೌರವದ ಕಾರಣಕ್ಕಾಗಿ ಅಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಸುಳ್ಳು ಬೇಗ ಹರಡುತ್ತದೆ. ಅದು ಸುಳ್ಳು ಎಂದು ಸಾಬೀತಾಗಲು ಸಮಯ ಬೇಕು. ಆದರೆ ಮಾಧ್ಯಮದಲ್ಲಿ ಬಂದ ಕೂಡಲೇ ಅದನ್ನು ಜನ ನಂಬುತ್ತಾರೆ. ಆದರೆ ಸತ್ಯ ಹೊರಬರುವುದು ಪೊಲೀಸ್ ತನಿಖೆ, ನ್ಯಾಯಲಯದ ಮೂಲಕ ಅದಕ್ಕಾಗಿ ನಾವೆಲ್ಲ ಭಯ ಪಡುತ್ತಿದ್ದೇವೆ ಎಂದು ಸಿಪಿವೈ ತಿಳಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net