ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ದೂರು ನೀಡಲು ಮುಂದಾದ ದಿನೇಶ್​ ಕಲ್ಲಹಳ್ಳಿ?

Dinesh 1
Published on

ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ‌ ಮಾಹಿತಿ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ನೀಡಲು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮುಂದಾಗಿರುವ ಬಗ್ಗೆ ತಿಳಿದುಬಂದಿದೆ.

ಸಿಡಿಯನ್ನು ಐದು ಕೋಟಿ ರೂಪಾಯಿಗೆ ಮೂರು ತಿಂಗಳ ಹಿಂದೆಯೇ ಡೀಲ್ ಮಾಡಲಾಗಿದೆ ಎಂದು ಮಾಜಿ ಸಿಎಂ ಎಚ್​ಡಿಕೆ ಹೇಳಿಕೆ ವಿಚಾರವಾಗಿ ಆಪ್ತರ ಜತೆ ಚರ್ಚಿಸಿದ್ದಾರೆನ್ನಲಾಗಿದೆ. ಎಚ್​ಡಿಕೆ ಮೂರು ತಿಂಗಳಿಂದ ಏನು ಮಾಡ್ತಿದ್ರು? ವಿಷಯ ತಿಳಿದ ತಕ್ಷಣ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಯಾಕೆ ಸುಮ್ಮನಾಗಿದ್ದರು. ವಿನಾಕಾರಣ ಸುಳ್ಳು ಸುಳ್ಳು ಆರೋಪ ಮಾಡಿ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಇದರಿಂದ ನನ್ನನ್ನು ನೋಡುವ ರೀತಿ ಬದಲಾಗಿದೆ. ಇದು ನನಗೆ ಮತ್ತು ನನ್ನ ಕುಟುಂಬದವರಿಗೆ ಮುಜುಗರ ತಂದಿದೆ ಎಂದು ದಿನೇಶ್​ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.

ನಾನು ಈ ಹಿಂದೆ ಹತ್ತಾರು ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅದು ದಾಖಲೆಗಳ ಸಮೇತ ನಾನು ಹೋರಾಟ ನಡೆಸಿದ್ದೇನೆ. ಆದ್ರೆ, ಮಾಜಿ ಸಿಎಂ ಕುಮಾರಸ್ವಾಮಿಯವರು ಮಾಡಿರುವ ಆರೋಪ ಎಷ್ಟು ಸರಿ? ಈ ಬಗ್ಗೆ ಕಾನೂನು ಹೋರಾಟ ಮಾಡುವ ಚಿಂತನೆ ನಡೆಸಿರುವುದಾಗಿ ಸ್ನೇಹಿತರ ಜತೆ ದಿನೇಶ್​ ಸಮಾಲೋಚನೆ ನಡೆಸಿದ್ದಾರೆನ್ನಲಾಗಿದೆ.

ಸುದೀರ್ಘ ನಾಲ್ಕು ಪುಟಗಳ ದೂರು ಸಿದ್ಧಪಡಿಸುತ್ತಿರುವ ದಿನೇಶ್​, ದೂರನ್ನ ಎಲ್ಲಿ? ಯಾವಾಗ? ಯಾರಿಗೆ? ಕೊಟ್ಟು ಹೋರಾಟ ಮಾಡಬೇಕೆಂದು ಇಂದು ನಿರ್ಧಾರ ಮಾಡುವುದಾಗಿ ಹೇಳಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆಂದು ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net