ಪಾಕಿಸ್ತಾನದಲ್ಲಿ ಒಂದೇ ಕುಟುಂಬದ ಐವರು ಹಿಂದುಗಳ ಹತ್ಯೆ: ಬೆಚ್ಚಿಬಿದ್ದ ಸ್ಥಳೀಯ ನಿವಾಸಿಗಳು

Hindu 1
Published on

ನವದೆಹಲಿ: ಹಿಂದು ಕುಟುಂಬದ ಐವರು ಸದಸ್ಯರ ಮೃತದೇಹವು ಕತ್ತು ಸೀಳಿದ ಸ್ಥಿತಿಯಲ್ಲಿ ನಿಗೂಢವಾಗಿ ಪತ್ತೆಯಾಗಿರುವ ಘಟನೆ ಪಾಕಿಸ್ತಾನದಲ್ಲಿ ಶುಕ್ರವಾರ ನಡೆದಿದ್ದು, ಮೇಲ್ನೋಟಕ್ಕೆ ಕೊಲೆಯಾಗಿದ್ದಾರೆನ್ನಲಾಗಿದೆ.

ಪಾಕ್​ ನಗರ ರಹೀಮ್​ ಯಾರ್​ ಖಾನ್​ನಿಂದ 15 ಕಿ.ಮೀ ದೂರವಿರುವ ಅಬುದಾಬಿ ಕಾಲನಿಯಲ್ಲಿನ ನಿವಾಸದಲ್ಲಿ ಐವರ ಮೃತದೇಹ ಪತ್ತೆಯಾಗಿದೆ ಎಂದು ದಿ ನ್ಯೂಸ್​ ಇಂಟರ್ನ್ಯಾಷನಲ್​ ವರದಿ ಮಾಡಿದೆ. ಹರಿತವಾದ ಆಯುಧದಿಂದ ಕತ್ತು ಸೀಳಿದ ಸ್ಥಿತಿಯಲ್ಲಿ ಐವರ ಮೃತದೇಹ ಪತ್ತೆಯಾಗಿದೆ.

ಪೊಲೀಸರು ಮೃತರ ಮನೆಯಲ್ಲಿ ಕೊಲೆ ಬಳಸಿದ್ದಾರೆನ್ನಲಾದ ಚಾಕು ಮತ್ತು ಕೊಡಲಿ ಸೇರಿದಂತೆ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಮೃತರೊಬ್ಬರ ಬಗ್ಗೆ ಮಾಹಿತಿ ನೀಡಿರುವ ರಹೀಮ್​ ಯಾರ್​ ಖಾನ್ ನಗರದ ಸಾಮಾಜಿಕ ಕಾರ್ಯಕರ್ತ​ ಬೀರ್​ಬಲ್​ ದಾಸ್​, ಮೇಘ್ವಾಲ್​ ಹಿಂದು ಆಗಿರುವ ರಾಮ್​ ಛಾಂದ್​ ವಯಸ್ಸು 35-36. ಛಾಂದ್​ ಟ್ರೈಲರಿಂಗ್​ ಶಾಪ್​ ನಡೆಸುತ್ತಿದ್ದರು. ಇದೀಗ ಘಟನೆಯಿಂದ ಸ್ಥಳೀಯರಿಗೆ ಶಾಕ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net