More

    ‘ಮೋದಿ ಕಿ ದುಕಾನ್’​ನಲ್ಲಿ ​​ಕೈಗೆಟಕುವ ಬೆಲೆಯಲ್ಲಿ ಔಷಧಿಗಳು

    ಶಿಲಾಂಗ್: ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುತ್ತಿರುವ ಪ್ರಧಾನ ಮಂತ್ರಿ ಜನ ಔಷಧಿ ಯೋಜನೆಯಡಿ 7,500ನೇ ಜನ ಔಷಧಿ ಕೇಂದ್ರವನ್ನು ಮೇಘಾಲಯದ ರಾಜದಾನಿ ಶಿಲ್ಲಾಂಗ್​ನಲ್ಲಿ ಇಂದು ತೆರೆಯಲಾಯಿತು. ಶಿಲಾಂಗ್​ನ ನಾರ್ತ್ ಈಸ್ಟರ್ನ್ ಇಂದಿರಾ ಗಾಂಧಿ ರೀಜನಲ್ ಇನ್ಸ್​ಟಿಟ್ಯೂಟ್ ಆಫ್ ಹೆಲ್ತ್​ ಅಂಡ್​ ಮೆಡಿಕಲ್ ಸೈನ್ಸಸ್​​ನ ಆವರಣದಲ್ಲಿ ಈ ಕೇಂದ್ರವನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಉದ್ಘಾಟಿಸಿದರು.

    ಈ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ, ಮಾರ್ಚ್ 1 ರಿಂದ ಮಾರ್ಚ್ 7 ರವರೆಗೆ ರಾಷ್ಟ್ರದಾದ್ಯಂತ ‘ಜನ ಔಷಧಿ – ಸೇವಾ ಭಿ, ರೊಜ್ಗಾರ್ ಭಿ’ ಎಂಬ ಘೋಷವಾಕ್ಯದೊಂದಿಗೆ ‘ಜನ ಔಷಧಿ ವಾರ’ ಆಚರಿಸಲಾಯಿತು. ವಾರದ ಕೊನೆಯ ದಿನವಾದ ಇಂದು (ಮಾರ್ಚ್ 7) ‘ಜನ ಔಷಧಿ ದಿವಸ್’ಅನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಯೋಜನೆಯ ಫಲಾನುಭವಿಗಳೊಂದಿಗೆ ವಿಚಾರ ವಿನಿಮಯ ನಡೆಸಿದ ಪ್ರಧಾನಿ ಮೋದಿ, ಜನೌಷಧಿ ಕೇಂದ್ರಗಳನ್ನು ಚೆನ್ನಾಗಿ ನಡೆಸುತ್ತಿರುವವರಿಗೆ ಪ್ರಶಸ್ತಿಗಳನ್ನು ಘೋಷಿಸಿದರು.

    ಇದನ್ನೂ ಓದಿ: ಹಾಲುಂಡ ತವರನ್ನು ಬಿಟ್ಟು ಗಂಡನ ಮನೆಗೆ ಹೋಗುವಾಗ ಬಿಕ್ಕಿಬಿಕ್ಕಿ ಅತ್ತ ವಧು ಮಸಣ ಸೇರಿದಳು!

    ಫಲಾನುಭವಿಯೊಬ್ಬರೊಂದಿಗೆ ಮಾತನಾಡುತ್ತಾ, ಜನ ಔಷಧಿ ಕೇಂದ್ರಗಳನ್ನು ಜನರು ‘ಮೋದಿ ಕಿ ದುಕಾನ್'(ಮೋದಿಯ ಅಂಗಡಿ) ಎಂದು ಕರೆಯುವುದನ್ನು ಪ್ರಧಾನಿ ಮೋದಿ ಸಂತಸದಿಂದ ಉಲ್ಲೇಖಿಸಿದರು. “ಔಷಧಿಗಳು ದುಬಾರಿಯಾಗಿವೆ. ಅದಕ್ಕಾಗಿಯೇ ನಾವು ಜನರ ಹಣವನ್ನು ಉಳಿಸಲು, ಬಡವರಿಗೆ ಔಷಧಿ ತಲುಪಿಸಲು ಪ್ರಧಾನ ಮಂತ್ರಿ ‘ಜನೌಷಧಿ’ ಯೋಜನೆಯನ್ನು ರೂಪಿಸಿದ್ದೇವೆ. ಈ ನಿಮ್ಮ ‘ಮೋದಿ ಕಿ ದುಕಾನ್’ನಿಂದ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳನ್ನು ಖರೀದಿಸಿ ಎಂದು ಜನರನ್ನು ಕೋರುತ್ತೇನೆ” ಎಂದರು.

    “ಜನೌಷಧಿ ಪರಿಯೋಜನೆ ಸೇವೆ ಮತ್ತು ಉದ್ಯೋಗ ಎರಡಕ್ಕೂ ಮಾಧ್ಯಮವಾಗಿದೆ. ದೇಶಾದ್ಯಂತ ಬಡ ಮತ್ತು ಮಧ್ಯಮ ಆದಾಯವಿರುವ ಕುಟುಂಬಗಳಿಗೆ ಗುಣಮಟ್ಟದ ಔಷಧಿಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸಲಾಗುತ್ತಿದೆ. ಅಂತೆಯೇ ಇದು ಯುವಜನರಿಗೆ ಉದ್ಯೋಗಾವಕಾಶಗಳನ್ನು ಸಹ ಒದಗಿಸುತ್ತಿದೆ” ಎಂದು ಮೋದಿ ಹೇಳಿದರು. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪಶ್ಚಿಮ ಬಂಗಾಳ ಚುನಾವಣೆ : ಡೆಬ್ರಾ ಕ್ಷೇತ್ರದಲ್ಲಿ ಐಪಿಎಸ್​ v/s ಐಪಿಎಸ್

    ಅಪ್ಪನ ಹೆಸರು ಕೇಳಿದವನಿಗೆ ಕಾದಿತ್ತು ಶಾಕ್! 27 ವರ್ಷಗಳ ಹಿಂದೆ ನಡೆದಿತ್ತು ಅಪರಾಧ!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts