ಪೊಲೀಸರ ಕೈಗೆ ಸಿಕ್ಕಿಬಿದ್ದು ಕಾಸಿಲ್ಲ-ಕ್ಯಾಷಿಲ್ಲ ಅನ್ನೋ ಹಾಗಿಲ್ಲ; ಏಕೆಂದರೆ ಪೇಟಿಎಂ ಮಾಡಿ ಅಂತಾರೆ!

Traffic
Published on

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕೈಗೆ ಸಿಕ್ಕಿಬೀಳುವ ಕೆಲವರು, 'ಸರ್ ಕಾಸಿಲ್ಲ-ಕ್ಯಾಷಿಲ್ಲ..' ಎಂದು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿದೆ. ಆದರೆ ಅಂಥವರು ಇನ್ನು ಅಷ್ಟು ಸುಲಭದಲ್ಲಿ ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಸದ್ಯದಲ್ಲೇ ಪೊಲೀಸರು ಪೇಟಿಎಂ ಮೂಲಕವೂ ದಂಡ ವಿಧಿಸಲಿದ್ದಾರೆ.

ಪೊಲೀಸರು ದಂಡದ ಹಣವನ್ನು ನಗದು ತೆಗೆದುಕೊಳ್ಳುವ ಹಾಗಿರಬಾರದು. ಡಿಜಿಟಲ್​ ಪೇಮೆಂಟ್​ ಮೂಲಕ ನೇರ ಖಾತೆಗೇ ಹಣ ಹೋಗುವ ಹಾಗಿರಬೇಕು ಎಂಬ ಬೇಡಿಕೆಯನ್ನು ಒಂದಷ್ಟು ಮಂದಿ ಇಡುತ್ತಲೇ ಬಂದಿದ್ದಾರೆ. ಅದೀಗ ನಿಜವಾಗುವ ಕಾಲ ಸನ್ನಿಹಿತವಾಗಿದೆ.

ಬೆಂಗಳೂರು ಸಂಚಾರ ಪೊಲೀಸರು ಪೇಟಿಎಂ ಸಹಯೋಗದಲ್ಲಿ ಟ್ರಾಫಿಕ್​ ಚಲನ್ ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಎಲ್ಲಿಂದ ಯಾವಾಗ ಬೇಕಿದ್ದರೂ ಚಲನ್​ ಪಾವತಿಸುವ ಈ ವ್ಯವಸ್ಥೆ ಅತಿಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net