

ಮೈಸೂರು: ಗ್ಯಾಸ್ ಗೀಸರ್ ( Gas Geyser ) ಸೋರಿಕೆಯಾಗಿ ಇಬ್ಬರು ಸಹೋದರಿಯರು ದುರಂತ ಸಾವಿಗೀಡಾಗಿರುವ ಘಟನೆ ಮೈಸೂರಿನಲ್ಲಿ ನಿನ್ನೆ (ಅ.24) ನಡೆದಿದೆ.
ಮೃತರನ್ನು ಗುಲ್ಫಾಮ್ (23) ಮತ್ತು ಸಿಮ್ರಾನ್ ತಾಜ್ (20) ಎಂದು ಗುರುತಿಸಲಾಗಿದೆ. ಇವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ನಿವಾಸಿಗಳು. ಗುರುವಾರ ರಾತ್ರಿ ಇಬ್ಬರು ತಮ್ಮ ಸ್ನಾನಗೃಹಕ್ಕೆ ಸ್ನಾನ ಮಾಡಲೆಂದರು ತೆರಳಿದರು. ಗೀಸರ್ ಆನ್ ಮಾಡಿದಾಗ ಅದು ಉರಿದು, ಅದರಿಂದ ಹೊರಬಂದ ಕಾರ್ಬನ್ ಮಾನಾಕ್ಸೈಡ್ ಅನ್ನು ಉಸಿರಾಡಲು ಆಗದೇ ಇಬ್ಬರು ಮೃತಪಟ್ಟಿದ್ದಾರೆ.
ಸಹೋದರಿಯರು ಬಹಳ ಸಮಯದಿಂದ ಶೌಚಾಲಯದಿಂದ ಹೊರಬರದಿದ್ದಾಗ, ಅವರ ತಂದೆ ಅಲ್ತಾಫ್ ಅನುಮಾನಗೊಂಡು ಬಾಗಿಲು ತೆರೆದಾಗ, ತನ್ನ ಹೆಣ್ಣುಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡರು. ಅವರಿಬ್ಬರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷೆ ಮಾಡಿದ ವೈದ್ಯರು ಇಬ್ಬರು ಮೃತಪಟ್ಟಿರುವುದಾಗಿ ಘೋಷಿಸಿದರು.
ಅಲ್ತಾಫ್ ಪಾಷಾಗೆ ನಾಲ್ಕು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಇಬ್ಬರು ವಿವಾಹಿತರಾಗಿದ್ದಾರೆ. ಮೃತ ಗುಲ್ಬಮ್ ತಾಜ್ (23) ಕೂಡ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರು ಶೀಘ್ರದಲ್ಲೇ ಮದುವೆಯಾಗಬೇಕಿತ್ತು. ಇಬ್ಬರು ಯುವತಿಯರ ಸಾವು ಅಲ್ತಾಫ್ ಪಾಷಾ ಅವರ ಕುಟುಂಬ ಮತ್ತು ಸಂಬಂಧಿಕರನ್ನು ಅಪಾರ ದುಃಖದಲ್ಲಿ ಮುಳುಗಿಸಿದೆ.
ಈ ಮಧ್ಯೆ, ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಶನಿವಾರ ಬೆಳಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ತ್ರಿವೇಣಿ ನಗರದಲ್ಲಿ ಈ ಘಟನೆ ನಡೆದಿದೆ. ಸ್ಫೋಟದಿಂದಾಗಿ ಕಟ್ಟಡ ಕುಸಿದಿದ್ದು, ಹತ್ತಿರದ ಕೆಲವು ಮನೆಗಳಿಗೂ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.