

ಬೆಂಗಳೂರು: ಚಿನ್ನಾಭರಣ ಕದ್ದ ಆರೋಪಿಯೊಬ್ಬ ದೂರು ದಾಖಲಾದ 24 ಗಂಟೆಯೊಳಗೆ ಸಿಕ್ಕಿ ಬಿದ್ದಿದ್ದಾನೆ. ಚಂದ್ರಾ ಬಡಾವಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ನಯಾಜ್ ಪಾಷಾ ಎಂಬಾತ ಬಂಧಿತ ಆರೋಪಿ.
ಈತ ಕಾರೊಂದರಲ್ಲಿ ಇರಿಸಿದ್ದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ. ಮಾತ್ರವಲ್ಲ, ಕಾರಿನಲ್ಲಿ ಇರಿಸಿದ್ದ ಪರ್ಸ್ ಕೂಡ ಕದ್ದೊಯ್ದಿದ್ದಾನೆ. ಕಳೆದುಕೊಂಡವರು ಈ ಬಗ್ಗೆ ಚಂದ್ರಾ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಾದ ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು 24 ಗಂಟೆಯೊಳಗೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 4.65 ಲಕ್ಷ ರೂ. ಮೌಲ್ಯದ 103 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.