More

    ಇಲ್ಲಿ ಇಡೀ ಗ್ರಾಮವೇ ಜಲಾವೃತ; ರಾಜಕಾಲುವೆ ಒತ್ತುವರಿಯಿಂದ ಅವಾಂತರ, ಜನರಲ್ಲಿ ತೀವ್ರ ಆತಂಕ..

    ಆನೇಕಲ್: ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ನಿನ್ನೆಯಿಡೀ ಸುರಿದ ಭಾರಿ ಮಳೆಗೆ ಭಾರಿ ಅನಾಹುತಗಳು ಸೃಷ್ಟಿಯಾಗಿದ್ದು, ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್​ನಲ್ಲಂತೂ ಒಂದಿಡೀ ಗ್ರಾಮವೇ ಜಲಾವೃತಗೊಂಡಿದ್ದು, ಅಲ್ಲಿನ ಜನತೆ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

    ಆನೇಕಲ್ ತಾಲೂಕಿನ ಬನಹಳ್ಳಿ ಸುತ್ತಮುತ್ತಲಿನ ಪ್ರದೇಶ ಪೂರ್ತಿ ನೀರು ಆವರಿಸಿಕೊಂಡಿದ್ದು, ಮನೆ, ಅಂಗಡಿ-ಮುಂಗಟ್ಟು, ಹೊಲ, ಗದ್ದೆ ಎಲ್ಲವೂ ಜಲಾವೃತವಾಗಿದೆ. ನೋಟ ಹಾಯಿಸಿದಲ್ಲೆಲ್ಲ ನೀರೇ ಕಾಣಿಸುತ್ತಿದ್ದು, ಜನರು ಮನೆಗೆ ನುಗ್ಗಿರುವ ನೀರು ಹೊರಹಾಕಲು ಪರದಾಡುತ್ತಿದ್ದಾರೆ.

    ಇದನ್ನೂ ಓದಿ: ಬಿಡಿಎನಲ್ಲಿ ಭಾರಿ ಭ್ರಷ್ಟಾಚಾರ?; ಎಸಿಬಿಯ 67 ಮಂದಿಯಿಂದ ಏಕಕಾಲಕ್ಕೆ ದಾಳಿ, ತನಿಖೆ ಇನ್ನೂ ಪ್ರಗತಿಯಲ್ಲಿ…

    ಭಾರಿ ಮಳೆಯ ನೀರು ಹೀಗೆ ಗ್ರಾಮದಲ್ಲಿ ನೆಲೆ ನಿಲ್ಲಲು ರಾಜಕಾಲುವೆ ಒತ್ತುವರಿ ಆಗಿರುವುದೇ ಕಾರಣ ಎನ್ನಲಾಗಿದೆ. ಸದ್ಯ ಗ್ರಾಮವೇ ಜಲಾವೃತವಾಗಿದ್ದು ಜನರು ಸಂಕಷ್ಟದಲ್ಲಿರುವಾಗ, ಮತ್ತೆ ಮಳೆ ಬೀಳುವ ಲಕ್ಷಣಗಳು ಗೋಚರಿಸುತ್ತಿದ್ದು, ಇನ್ನೂ ಮಳೆ ಮುಂದುವರಿದರೆ ಹೇಗೆ ಎನ್ನುವ ಭಯದಲ್ಲೇ ಜನರಿದ್ದಾರೆ.

    ಶ್ರೀ ಗುರುಲಿಂಗ ದೇವರ ಕಾರು ಡಿಕ್ಕಿ ಹೊಡೆದು ಪಲ್ಟಿ; ಇಬ್ಬರು ಪಾದಚಾರಿಗಳು ಸ್ಥಳದಲ್ಲೇ ಸಾವು…

    ಟ್ರ್ಯಾಕ್ಟರ್​ ಅಪಘಾತಕ್ಕೆ ಮೂರು ಬೈಕ್ ಜಖಂ; ಮಳೆಯೇ ಕಾಪಾಡಿತು, ಇಲ್ಲದಿದ್ದರೆ ಭಾರಿ ಅನಾಹುತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts