ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ 2 ಸಾವಿರ ಮನೆಗಳ ಮೇಲೆ ದಾಳಿ, 1500 ರೌಡಿಗಳು ವಶಕ್ಕೆ...

Untitled-1
ಬೆಂಗಳೂರಿನ ವಿವಿಧೆಡೆ ಪೊಲೀಸರು ದಾಳಿ ನಡೆಸಿದ ದೃಶ್ಯಗಳು
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಬೆಳ್ಳಂಬೆಳಗ್ಗೆ 2 ಸಾವಿರ ಮನೆಗಳ ಮೇಲೆ ದಾಳಿ ನಡೆಸಿದ್ದು, 1500 ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾನೂನುಸುವ್ಯವಸ್ಥೆ ನಿಟ್ಟಿನಲ್ಲಿ ವಿಶೇಷ ಅಭಿಯಾನ ಅಂಗವಾಗಿ ಬೆಂಗಳೂರಿನ ಪೊಲೀಸರು ಈ ದಾಳಿ ಕೈಗೊಂಡಿದ್ದಾರೆ.

ರಾಜಧಾನಿಯ ಎಲ್ಲ ಡಿಸಿಪಿಗಳ ನೇತೃತ್ವದಲ್ಲಿ ಮಹಾನಗರದಾದ್ಯಂತ ಬೆಳಗಿನ ಜಾವವೇ ಈ ದಾಳಿಯನ್ನು ನಡೆಸಿದ್ದು, ರೌಡಿ ಶೀಟರ್​ಗಳಿಗೆ ಸಂಬಂಧಿಸಿದ 2000 ಮನೆಗಳ ಮೇಲೆ ಏಕಾಏಕಿ ದಾಳಿ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ 1,500 ರೌಡಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಈ ವೇಳೆ ಕಂಡುಬಂದಿರುವ ಮಾರಕ ಅಸ್ತ್ರಗಳು, ಕಾನೂನುಬಾಹಿರವಾಗಿ ಇಟ್ಟುಕೊಂಡಿರುವ ಆಯುಧಗಳು, ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾತ್ರವಲ್ಲದೆ ಒಂದಷ್ಟು ಭೂಮಿಗೆ ಸಂಬಂಧಿಸಿದ ದಾಖಲೆಪತ್ರಗಳು, ಮೊಬೈಲ್​ಫೋನ್​, ಸಿಮ್​ ಕಾರ್ಡ್​ ಮಾತ್ರವಲ್ಲದೆ ಕೆಲವು ವಾಹನಗಳನ್ನೂ ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಗಿದೆ.

ಇವೆಲ್ಲದರ ಸಂಬಂಧ ವಿಸ್ತೃತ ವಿಚಾರಣೆ ನಡೆಯಲಿದ್ದು, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಕಂಡುಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ತಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಮಾತ್ರವಲ್ಲ ಬೆಂಗಳೂರು ಪೊಲೀಸರ ವ್ಯವಸ್ಥಿತವಾದ ಈ ಮಹಾ ಕಾರ್ಯಾಚರಣೆಗೆ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net