ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

Untitled-2
Published on

ಕೊಡಗು: ಕಾನೂನುಬಾಹಿರವಾದ ಬಾಲ್ಯವಿವಾಹ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಕೆಗಿಂತ ದುಪ್ಪಟ್ಟು ವಯಸ್ಸಿನ ವರನೊಂದಿಗೆ ಮದುವೆ ಮಾಡಿಸಿಕೊಡಲಾಗಿದೆ. ಕುಶಾಲನಗರದ ಬೈಚನಹಳ್ಳಿಯ ಮಾರಮ್ಮ ದೇವಸ್ಥಾನದಲ್ಲಿ ಈ ವಿವಾಹ ನೆರವೇರಿದ್ದು, ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಆಕೆಗಿಂತ ಸುಮಾರು ದುಪ್ಟಟ್ಟು ವಯಸ್ಸಿನ ಅಂದರೆ, 30 ವರ್ಷದ ಯುವಕನ ಜೊತೆ ಪಾಲಕರು ಮದುವೆ ಮಾಡಿಸಿದ್ದಾರೆ. ಹೀಗಾಗಿ ವರ, ವರನ ತಂದೆ-ತಾಯಿ, ಬಾಲಕಿಯ ತಾಯಿಯನ್ನು ಬಂಧಿಸಲಾಗಿದೆ. ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net