ವಿಚಾರಣಾಧೀನ ಕೈದಿಯ ಅನುಮಾನಾಸ್ಪದ ಸಾವು; ಕೋಲ್ಕತ ಮೂಲದ ರೂಪದರ್ಶಿ ಕೊಲೆ ಪ್ರಕರಣದ ನಾಗೇಶ್ ಇನ್ನಿಲ್ಲ

Nagesh
Published on

ಚಿಕ್ಕಬಳ್ಳಾಪುರ: ವಿಚಾರಣಾಧೀನ ಕೈದಿಯೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಮೃತಪಟ್ಟವರ ಸಂಬಂಧಿಕರು ಈ ಕುರಿತು ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜೈಲಿನಲ್ಲಿ ವಿಚಾರಾಣಧೀನ ಕೈದಿಯಾಗಿದ್ದ ನಾಗೇಶ್​ ಎಂಬಾತನೇ ಸಾವಿಗೀಡಾದ ವ್ಯಕ್ತಿ.

ಮಗ ನಿನ್ನೆ ಸಂಜೆಯಷ್ಟೇ ಕರೆ ಮಾಡಿ ಚೆನ್ನಾಗಿ ಮಾತನಾಡಿದ್ದ ಎಂದಿರುವ ಪಾಲಕರು, ಆತನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಮಗನ ಸಾವಿಗೆ ಕಾರಣ ಏನು ಎಂಬುದರ ಕುರಿತು ತನಿಖೆ ಆಗಬೇಕು ಎಂದು ಅವರು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿ ಆಗ್ರಹಿಸಿದ್ದಾರೆ.

ನಾಗೇಶ್ ತಡರಾತ್ರಿ ಜೈಲಿನಲ್ಲಿ ಅಸ್ವಸ್ಥಗೊಂಡಿದ್ದು, ಆತನನ್ನು ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವಾಂತಿ ಮಾಡಿ ಅಸ್ವಸ್ಥಗೊಂಡಿದ್ದ ನಾಗೇಶ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ಜೈಲು ಸೂಪರಿಂಟೆಂಡೆಂಟ್​ ಜಯರಾಮಯ್ಯ ಅವರು ನಾಗೇಶ್​ ಪಾಲಕರಿಗೆ ಕರೆ ಮಾಡಿ ತಿಳಿಸಿದ್ದರು.

ಕೋಲ್ಕತ ಮೂಲದ ರೂಪದರ್ಶಿ ಕೊಲೆ ಪ್ರಕರಣದ ಆರೋಪಿ ಆಗಿರುವ ನಾಗೇಶ್, ಎರಡು ವರ್ಷಗಳಿಂದ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ. ಈ ಕೊಲೆ ಪ್ರಕರಣ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net