More

    ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಮಗ; ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರ ಆರೋಪ, ಪ್ರತಿಭಟನೆ

    ಉಡುಪಿ: ಕಲಬುರಗಿಯ ಜಿಮ್ಸ್​ ಆಸ್ಪತ್ರೆಯಲ್ಲಿ ತಾಯಿ ಮತ್ತು ನವಜಾತ ಶಿಶು ಮೃತಪಟ್ಟಿರುವ ಘಟನೆಯ ಬೆನ್ನಿಗೇ ಮತ್ತೊಂದು ಅಂಥದ್ದೇ ಪ್ರಕರಣ ವರದಿಯಾಗಿದ್ದು, ಇದರಲ್ಲೂ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

    ಉಡುಪಿಯ ಬಿ.ಆರ್. ಶೆಟ್ಟಿ ಉಚಿತ ಹೆರಿಗೆ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಕೋಟೇಶ್ವರದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಷಾ ಎಂಬಾಕೆ ಸಾವಿಗೀಡಾಗಿದ್ದಾರೆ. ಗಂಡು ಮಗುವಿಗೆ ಜನ್ಮವಿತ್ತ ಕೆಲವೇ ನಿಮಿಷಗಳಲ್ಲಿ ತಾಯಿ ಉಷಾ ಸಾವಿಗೀಡಾಗಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಆತ್ಮಹತ್ಯೆ ತಡೆ ದಿನದ ತಿಂಗಳಲ್ಲೇ ಮೇಲಿಂದ ಮೇಲೆ ಆತ್ಮಹತ್ಯೆ; ಕಳೆದ ಮೂರು ದಿನಗಳಲ್ಲೇ ರಾಜ್ಯದಲ್ಲಿ 12 ಸುಸೈಡ್​

    ವೈದ್ಯರ ವಿರುದ್ಧ ಆರೋಪ ಹೊರಿಸಿರುವುದಷ್ಟೇ ಅಲ್ಲದೆ, ಮೃತಪಟ್ಟವರು ಕುಂಟುಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಕೈಮೀರದಂತೆ ತಡೆಯಲು ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

    ಇದನ್ನೂ ಓದಿ: ನನಗೂ ಹಣ ಕೊಡು, ಠಾಣೆಗೂ ದುಡ್ಡು ಕೊಡು ಎಂದು ರೌಡಿಶೀಟರ್​ ಬಳಿ ಲಂಚ ಕೇಳಿದ ಇನ್​ಸ್ಪೆಕ್ಟರ್​; ರೌಡಿಶೀಟರ್ ಪರ ಶಾಸಕರ ಶಿಫಾರಸು!

    ಸ್ಥಳಕ್ಕೆ ಜಿಲ್ಲಾ ಸರ್ಜನ್ ಮತ್ತು ಜಿಲ್ಲಾ ವೈದ್ಯಾಧಿಕಾರಿ ಕೂಡ ಭೇಟಿ ನೀಡಿದ್ದಾರೆ. ಹೆರಿಗೆಯಾದ ಬಳಿಕ ಉಷಾ ಅವರಲ್ಲಿ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಕೂಡಲೇ ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯಾಧಿಕಾರಿಯವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಇದರಿಂದ ಸಮಾಧಾನಗೊಳ್ಳದ ಸಂಬಂಧಿಕರು ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿದ್ದಾರೆ.

    ‘ವಿಜಯಾನಂದ’ ಚಿತ್ರದ ಆಡಿಷನ್ಸ್​ಗೆ ಜಮಾಯಿಸಿದ ಕಲಾವಿದರು

    ಹೆರಿಗೆ ಸಮಯದಲ್ಲಿ ತಾಯಿ-ಮಗು ಸಾವು: ಜಿಮ್ಸ್​ ಆಸ್ಪತ್ರೆಯಲ್ಲಿ ಘಟನೆ, ವೈದ್ಯರ ನಿರ್ಲಕ್ಷ್ಯ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts