ಆಟೋ-ಬೈಕ್ ಡಿಕ್ಕಿ, ಇಬ್ಬರು ಗಂಭೀರ

accident
Published on

ಮೂಲ್ಕಿ: ಕೆಎಸ್ ರಾವ್ ನಗರದ ಪೊಲೀಸ್ ಕ್ವಾರ್ಟರ್ಸ್ ಬಳಿಯ ಒಳ ರಸ್ತೆಯಲ್ಲಿ ಬೈಕ್ ಮತ್ತು ಆಟೋ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಟೋ ಚಾಲಕ ಕೆಎಸ್ ರಾವ್ ನಗರ ನಿವಾಸಿ ರಮೀಜ್ ಹಾಗೂ ಬೈಕ್ ಸವಾರ ಪುತ್ತೂರು ಬೆಳ್ಳಾರೆ ನಿವಾಸಿ ಕೊಲ್ನಾಡ್ ಭಾರತ್ ಬೆಂಜ್ ಕಂಪನಿಯಲ್ಲಿ ಟೆಕ್ನಿಷಿಯನ್ ಆಗಿರುವ ಯೋಗೀಶ್ ಗೌಡ ಗಾಯಾಳುಗಳು. ಕೆ.ಎಸ್. ರಾವ್ ನಗರದ ಪೊಲೀಸ್ ಕ್ವಾರ್ಟರ್ಸ್ ಬಳಿ ಮೂರು ರಸ್ತೆಗಳು ಸೇರುವ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಆಟೋಗೆ ಹಾನಿಯಾಗಿದ್ದು, ಚರಂಡಿಗೆ ಇಳಿದಿದೆ. ಮಂಗಳೂರು ಉತ್ತರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net