More

  ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದ ಆಂಬ್ಯುಲೆನ್ಸ್ ಕಾರಿಗೆ ಡಿಕ್ಕಿ: ಸ್ಥಳದಲ್ಲೇ ಮೂವರ ದಾರುಣ ಅಂತ್ಯ

  ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಕುಂಜತ್ತೂರಿನ ವಿರುದ್ಧ ದಿಕ್ಕಿನಲ್ಲಿ ಅಮಿತ ವೇಗದಲ್ಲಿ ಸಂಚರಿಸಿದ ಆಂಬ್ಯುಲೆನ್ಸ್ ಎದುರಿನಿಂದ ಬರುತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಕೂಡಾ ದಾರುಣವಾಗಿ ಸಾವನ್ನಪ್ಪಿದ್ದಾರೆ.

  ಕುಂಜತ್ತೂರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರದಂದು ಬೆಳಿಗ್ಗೆ 10-50 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
  ಬೆಂಗಳೂರಿನಿಂದ ತ್ರಿಶೂರು ಭಾಗಕ್ಕೆ ಕಾರಿನಲ್ಲಿ ಸಂಚರಿಸುತಿದ್ದ ಗುರುವಾಯೂರು ನಿವಾಸಿಗಳಾದ ಶರತ್ ಮೇನೂನ್ (23) ಶ್ರೀನಾಥ್ ಹಾಗೂ ಜೊತೆಯಾಗಿದ್ದ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದಿಂದ ಕಾರು ಪೂರ್ಣಣವಾಗಿಯೂ ನುಜ್ಜು ಗುಜ್ಜಾಗಿದ್ದು ಊರವರ ಹಾಗೂ ಅಗ್ನಿಶಾಮಕದಳ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಕಾರಿನೊಳಗಿದ್ದವರನ್ನು ಹೊರ ತೆಗೆದು ಮಂಗಲ್ಪಾಡಿ ಶವಗಾರಕ್ಕೆ ಕೊಂಡೊಯ್ಯಲಾಗಿದೆ.

  ನಿನ್ನೆ ಕಾಸರಗೋಡು ಚಟ್ಟಂಚ್ಬಾಲ್ ನಲ್ಲಿ ಅಪಘಾತಕ್ಕೀಡಾದ ಗಾಯಾಳು ಹಾಗೂ ಜೊತೆಯಾಗಿದ್ದ ಇಬ್ಬರನ್ನು ಕಾಸರಗೋಡಿನಿಂದ ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವಾಗ ಆಂಬ್ಯುಲೆನ್ಸ್ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಅಪಘಾತ ಸಂಭವಿಸಿದೆ. ಆಂಬ್ಯುಲೆನ್ಸ್ ನಲ್ಲಿದ್ದವರು ಕೂಡಾ ಗಾಯಗೊಂಡಿದ್ದು ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

  See also  ಭೀಕರ ಕಾರು ಅಪಘಾತದಲ್ಲಿ ಕಾಂಗ್ರೆಸ್​ ನಾಯಕನ ಮಗಳು, ಬ್ಯೂಟಿಷಿಯನ್​ ದುರಂತ ಸಾವು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts