More

    ಮೇ 9ರಂದು ಹಜ್ ಯಾತ್ರೆಗೆ ದ.ಕ. ಜಿಲ್ಲೆಯ ಮೊದಲ ತಂಡ ಪಯಣ



    ಮಂಗಳೂರು : ಹಜ್ ಯಾತ್ರೆಗೆ ದ.ಕ.ಜಿಲ್ಲೆಯ ಮೊದಲ ತಂಡ ಮೇ 9ರಂದು ಬೆಂಗಳೂರಿನಿಂದ ವಿಮಾನದ ಮೂಲಕ ತೆರಳಲಿದೆ ಎಂದು ರಾಜ್ಯ ಹಜ್ ಸಮಿತಿಯ ಸದಸ್ಯ ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಈ ಬಾರಿ ದ.ಕ.ಜಿಲ್ಲೆಯಿಂದ 1044 ಮಂದಿ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಕರೊನಾ ಬಳಿಕ ಮಂಗಳೂರಿನಿಂದ ಹಜ್ ಯಾತ್ರೆಗೆ ನೇರ ವಿಮಾನ ಸೌಲಭ್ಯವಿಲ್ಲ. ಮಂಗಳೂರಿನಿಂದ ನೇರ ವಿಮಾನ ಸ್ಥಗಿತಗೊಂಡ ಬಳಿಕ ಬೆಂಗಳೂರು ಮತ್ತು ಕೇರಳದ ಮೂಲಕ ವಿಮಾನದಲ್ಲಿ ಹಜ್ ಯಾತ್ರೆ ಕೈಗೊಳ್ಳಬೇಕಾಗಿದೆ. ಮುಂದಿನ ವರ್ಷ ಮಂಗಳೂರು ವಿಮಾನ ನಿಲ್ದಾಣದಿಂದಲೇ ಹಜ್‌ಗೆ ವಿಮಾನ ಸೌಲಭ್ಯ ನೀಡುವಂತೆ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
    ಯಾತ್ರೆ ಕೈಗೊಳ್ಳುವ ಎಲ್ಲರಿಗೂ ಲಸಿಕೆ ಹಾಗೂ ಹಜ್ ತರಬೇತಿ ನೀಡಲಾಗಿದೆ. ಎಂದು ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ತಿಳಿಸಿದರು.
    ಬ್ಯಾರಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಎಸ್.ಎಂ. ರಶೀದ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್, ಬಿ.ಎಸ್.ಬಶೀರ್, ಮಹಮ್ಮದ್ ನೀಫ್ ಗೋಳ್ತಮಜಲು, ಮಹಮ್ಮದ್ ರಫೀಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts