ತರಗತಿಯಲ್ಲೇ ಹೊಡೆದಾಟ; ವಿದ್ಯಾರ್ಥಿಯೊಬ್ಬನಿಂದ ಇನ್ನೊಬ್ಬನ ಮೇಲೆ ರಾಡ್​ನಿಂದ ಹಲ್ಲೆ..

School
Published on

ಬೆಂಗಳೂರು: ರಾಜ್ಯ ರಾಜಧಾನಿಯ ಶಾಲೆಯೊಂದರಲ್ಲಿ ತರಗತಿಯೊಳಗೆ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದು, ಒಬ್ಬ ಇನ್ನೊಬ್ಬನ ಮೇಲೆ ರಾಡ್​ನಿಂದ ಹಲ್ಲೆ ಮಾಡಿದ್ದಾನೆ. ಈ ಹೊಡೆದಾಟದ ದೃಶ್ಯಗಳಿರುವ ವಿಡಿಯೋವೊಂದು ಸಾಕಷ್ಟು ಹರಿದಾಡುತ್ತಿದ್ದರೂ ಶಾಲೆಯವರು ಮೌನ ತಾಳಿದ್ದಾರೆ.

ಬೆಂಗಳೂರಿನ ಚಿಕ್ಕಬಾಣವಾರದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಹೊಡೆದಾಟದಲ್ಲಿ ತೊಡಗಿಕೊಂಡಿರುವ ಮಕ್ಕಳು 9ನೇ ತರಗತಿಯವರು ಎನ್ನಲಾಗಿದೆ. ಶಿಕ್ಷಕರು ಪಾಠ ಮಾಡುವ ಸ್ಥಳದಲ್ಲಿನ ಮೇಜಿನ ಬಳಿ ವಿದ್ಯಾರ್ಥಿಯೊಬ್ಬ ನಿಂತಿದ್ದು, ಆತನ ಬಳಿಗೆ ಮತ್ತೊಬ್ಬ ಬಂದು ಮಾತನಾಡುವ ದೃಶ್ಯದಿಂದ ವಿಡಿಯೋ ಆರಂಭಗೊಳ್ಳುತ್ತದೆ. ಕೆಲವೇ ಕ್ಷಣದಲ್ಲಿ ಮೇಜಿನ ಮೇಲಿದ್ದ ರಾಡ್​ನಿಂದ ಒಬ್ಬ ಹಲ್ಲೆ ಮಾಡಿದ್ದು, ಕ್ಲಾಸ್ ತುಂಬಾ ಓಡಾಡಿರುತ್ತಾರೆ.

ಹಲ್ಲೆ ನಡೆಸಿರುವ ವಿದ್ಯಾರ್ಥಿಯ ತಂದೆ ಆಸ್ಪತ್ರೆಯೊಂದರ ನೌಕರನಾಗಿದ್ದು, ಗಾಯಗೊಂಡ ವಿದ್ಯಾರ್ಥಿಗೆ ಚಿಕಿತ್ಸೆ ಕೊಡಿಸಿ ವಿಷಯ ಗುಟ್ಟಾಗಿ ಇರಿಸಲು ಪ್ರಯತ್ನಿಸಲಾಗಿದೆ ಎನ್ನಲಾಗಿದೆ. ಯಾವ ಕಾರಣಕ್ಕೆ ಹೊಡೆದಾಡಿಕೊಂಡಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಇಷ್ಟಾದರೂ ಶಾಲಾ ಪೊಲೀಸರಿಗೆ ದೂರು ನೀಡದೆ ಅಥವಾ ಯಾವುದೇ ಕ್ರಮಕೈಗೊಳ್ಳದೆ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net