ಪೊಲೀಸ್ ಠಾಣೆಗೆ ಹತ್ತಿರದಲ್ಲೇ ಆರ್​ಟಿಐ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

Untitled-1
Published on

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅದರಲ್ಲೂ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲೇ ಈ ಹಲ್ಲೆ ನಡೆದಿದ್ದು, ಆರ್​ಟಿಐ ಕಾರ್ಯಕರ್ತನ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ.

ಬೆಂಗಳೂರು ಹೊರವಲಯದ ಮಾಗಡಿ ರಸ್ತೆ ತಾವರೆಕೆರೆ ಮೂಲದ ವೆಂಕಟೇಶ್ ಮಾಮಯ್ಯ (50) ಹಲ್ಲೆಗೊಳಗಾದವರು, ಮಾಗಡಿ ರಸ್ತೆಯ ತಾವರೆಕೆರೆ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲೇ ಈ ಹಲ್ಲೆ ನಡೆದಿದೆ. ವೆಂಕಟೇಶ್ ಅವರು ತಮ್ಮ ತೋಟದಲ್ಲಿರುವಾಗ ಮುಖಕ್ಕೆ ಮುಚ್ಚಿಕೊಂಡು ದಾಳಿ ಇಟ್ಟ ನಾಲ್ವರು ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕ ಹಲ್ಲೆಯ ತೀವ್ರತೆಗೆ ವೆಂಕಟೇಶ್​ ಅವರ ಕೈ-ಕಾಲು ತುಂಡಾಗಿ ಪ್ರತ್ಯೇಕಗೊಂಡಿವೆ. ಸದ್ಯ ಅವರನ್ನು ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net