ಇದೇ ಗ್ಯಾಂಗ್​ ಕೈಯಲ್ಲಿದೆ ಕಾಂಗ್ರೆಸ್​ ನಾಯಕರ ಸಿಡಿ! ಲಕ್ಷ ಲಕ್ಷ ಕೊಟ್ಟು ಬಚಾವಾದ ಆ ನಾಯಕರು ಯಾರು ಗೊತ್ತಾ?

cd
Published on

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ ಸೂತ್ರಧಾರರ ಖತರ್ನಾಕ್ ಹಿಸ್ಟರಿ ರಿವೀಲ್ ಆಗಿದೆ. ಈ ಗ್ಯಾಂಗ್ ಮಾಡಿರೋದು ಜಾರಕಿಹೊಳಿಯ ಸಿಡಿ ಮಾತ್ರವಲ್ಲ, ಕಾಂಗ್ರೆಸ್​ಮ ಇಬ್ಬರು ಪ್ರಭಾವಿ ಜನಪ್ರತಿನಿಧಿಗಳ ಸಿಡಿಯನ್ನೂ ಮಾಡಿ ಲಕ್ಷ ಲಕ್ಷ ಹಣ ಪೀಕಿದೆಯಂತೆ...

ಸಿಡಿ ಕೇಸ್​ನ ಶಂಕಿತ ಕಿಂಗ್​ಪಿನ್​ ಒಳಗೊಂಡ ಟೀಂ ಈ ಹಿಂದೆ ಮಾಡಿದ್ದ ಡೀಲ್​ಗಳನ್ನ ಕಂಡು ಎಸ್​ಐಟಿ ತಂಡವೇ ದಂಗಾಗಿದೆ. ಮಾ.2ರಂದು ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ವೈರಲ್​ ಆಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಮರುದಿನವೇ ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೂರುದಾರ ದಿನೇಶ್​ ಕಲ್ಲಹಳ್ಳಿ ದೂರು ಹಿಂಪಡೆಗೆ ನಿರ್ಧರಿಸುತ್ತಿದ್ದಂತೆ ರಮೇಶ್​ ಜಾರಕಿಹೊಳಿ, ‘ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ, ಇದು ನಕಲಿ ಸಿಡಿ’ ಎಂದು ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ‘ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ-ಮರ್ಯಾದೆ ಊರು ತುಂಬಾ ಹರಾಜಾಗಿದೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದಾರೋ ನನಗೆ ಗೊತ್ತಿಲ್ಲ. ಗೃಹಸಚಿವರು ನನಗೆ ರಕ್ಷಣೆ ನೀಡಬೇಕು’ ಎಂದು ಸಿಡಿ ಲೇಡಿ ಮನವಿ ಮಾಡಿಕೊಂಡಿದ್ದರ ವಿಡಿಯೋವನ್ನು ಅಜ್ಞಾತ ಸ್ಥಳದಿಂದಲೇ ರಿಲೀಸ್​ ಮಾಡಲಾಗಿತ್ತು. ಇದನ್ನೂ ಓದಿರಿ ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ಸಿಡಿ ಕೇಸ್​ ಬಗ್ಗೆ ತನಿಖೆ ನಡೆಸುತ್ತಿರುವ ಎಸ್​ಐಟಿ ತಂಡ ಸಿಡಿ ಕೇಸ್​ನ ಯುವತಿಯನ್ನ ವಿಚಾರಣೆ ನಡೆಸಲು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಆ ಯುವತಿ ಸಿಡಿ ಹೊರ ಬಂದ ಕೂಡಲೇ ಸಿಡಿ ಕೇಸ್​ನ ಶಂಕಿತ ಕಿಂಗ್​​ಪಿನ್, ಹ್ಯಾಕರ್ ಜತೆ ಬೆಂಗಳೂರು ಬಿಟ್ಟಿದ್ದಾಳೆ. ಬೆಂಗಳೂರಿನಿಂದ ನೇರವಾಗಿ ಆರೋಪಿಗಳು ಮತ್ತು ಯುವತಿ ಗೋವಾ, ಚೆನ್ನೈ, ಹೈದ್ರಾಬಾದ್, ಎರ್ನಾಕಲುಂ, ಕೊಚ್ಚಿ... ಹೀಗೆ ಊರೂರು ಸುತ್ತಿದ್ದಾರಂತೆ. ಇನ್ನೇನು ಸಿಕ್ಕಿದ್ರು ಅನ್ನುವಷ್ಟರಲ್ಲಿ ಶಂಕಿತ ಆರೋಪಿಗಳು ಎಸ್ಕೇಪ್​ ಆಗುತ್ತಿದ್ದು, ಅವರನ್ನು ಹುಡುಕಲು ಎಸ್​ಐಟಿ ಕಾರ್ಯಾಚರಣೆ ನಡೆಸುತ್ತಲೇ ಇದೆ.

ಈ ನಡುವೆ ಸಿಡಿ ಕೇಸ್​ನ ಸೂತ್ರಧಾರಿಗಳು ಹಿಂದೆ ಮಾಡಿದ್ದ ಡೀಲ್​ಗಳ ರಹಸ್ಯ ಒಂದೊಂದೇ ಬಯಲಾಗುತ್ತಿದೆ. ಇವರ ಸಿಡಿ ಸುಳಿಗೆ ಸಿಲುಕಿದ್ದು ರಮೇಶ್​ ಜಾರಕಿಹೊಳಿ ಮಾತ್ರವಲ್ಲ, ಇದಕ್ಕೂ ಮುನ್ನ ಕಾಂಗ್ರೆಸ್​ನ ಇಬ್ಬರು ಪ್ರಭಾವಿ ನಾಯಕರನ್ನು ಟ್ರ್ಯಾಪ್​ ಮಾಡಿದ್ದರಂತೆ. ಅವರು ಯಾರು ಗೊತ್ತಾ? ಇದನ್ನೂ ಓದಿರಿ ಕಬಡ್ಡಿ ಕ್ರೀಡಾಪಟುಗಳಿದ್ದ ಕಾರು ಅಪಘಾತ: ಆಟಗಾರರಿಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

ಚಿತ್ರದುರ್ಗ ಮೂಲದ ಮಾಜಿ ಸಚಿವರೊಬ್ಬರು ಸಿಡಿ ಗ್ಯಾಂಗ್​ನ ಖೆಡ್ಡಾಗೆ ಬಿದ್ದಿದ್ದು, ಮಾ. 1ರಂದು ಸಿಡಿ ಯುವತಿಗೆ 50,000 ಹಣ ಕೊಟ್ಟಿದ್ದಾರೆ. ಅರ್ಜೆಂಟ್ 60 ಸಾವಿರ ಹಣ ಬೇಕು ಕೊಡಿ ಎಂದು ಆ ಯುವತಿ ಕೇಳಿದ್ದಳಂತೆ. ಅದಕ್ಕೆ ಮಾಜಿ ಸಚಿವರು 50 ಸಾವಿರ ಹಣ ಕೊಟಿದ್ದಾರೆ. ಇದಲ್ಲದೆ ಹಾವೇರಿ ಮೂಲದ ಮತ್ತೊಬ್ಬ ಜನಪ್ರತಿನಿಧಿಯ ಸಿಡಿ ಇಟ್ಕೊಂಡು ಡೀಲ್ ಕುದುರಿಸಿತ್ತಂತೆ ಸಿಡಿ ಗ್ಯಾಂಗ್​. ಮಾನ-ಮರ್ಯಾದೆಗೆ ಅಂಜಿ 75 ಲಕ್ಷ ರೂ. ಕೊಟ್ಟಿದ್ರಂತೆ ಆ ಮಾಜಿ ಶಾಸಕ. ಎಸ್​ಐಟಿ ತನಿಖೆಯಲ್ಲಿ ಸಿಡಿ ಗ್ಯಾಂಗ್​ನ ಖರಾಳ ಮುಖ ರಿವೀಲ್ ಆಗಿದೆ ಎಂದು ಮೂಲಗಳು ತಿಳಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net