ಸಿಡಿ ಲೇಡಿ ಪಿಜಿಯ ಕಪಾಟಿನಲ್ಲಿತ್ತು ಪ್ರಕರಣದ ಪ್ರಮುಖ ಸಾಕ್ಷಿ..!

cd girl_new
Published on

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಜತೆ ಸಿಡಿ ಲೇಡಿ ವಿಡಿಯೋ ಕಾಲ್​ನಲ್ಲಿ ಮಾತನಾಡಲು ಬಳಸಿದ್ದ ಮೊಬೈಲ್​ ಅನ್ನು ಎಸ್​ಐಟಿ ಅಧಿಕಾರಿಗಳು ಜಪ್ತಿ ಮಾಡಿರುವುದಾಗಿ ತಿಳಿದುಬಂದಿದೆ.

ವಿಡಿಯೋ ರೆಕಾರ್ಡ್​ ಮಾಡಿದ ಮೊಬೈಲ್ ಯಾವುದು? ಆ ಸಮಯದಲ್ಲಿ ಸಿಮ್ ಕಾರ್ಡ್ ಯಾವುದಿತ್ತು? ಎಂಬುದರ ಎಲ್ಲಾ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ.

ವಿಡಿಯೋ ಕಾಲ್ ಮಾಡಿದ್ದ ಮೊಬೈಲ್ ಕೂಡ ವಶಕ್ಕೆ ಪಡೆಯಲಾಗಿದೆ. ಮೊಬೈಲ್ ಅನ್ನು ಸ್ವತಃ ಯುವತಿಯೇ ಕೊಟ್ಟಿದ್ದಾಳೆಂಬ ಮಾಹಿತಿ ಇದೆ. ಪಿಜಿಯ ಕಪಾಟಿನಲ್ಲಿ ಸ್ವಿಚ್ ಆಫ್ ಮಾಡಿ ಬಚ್ಚಿಟ್ಟಿದ್ದ ಮೊಬೈಲ್​ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಇದಕ್ಕೂ ಮುನ್ನ ಪಿಜಿ‌ ಮಾಲೀಕರಿಗಿಂತ ಮುಂಚಿತವಾಗಿ ಯುವತಿಯಿಂದ ಅಧಿಕಾರಿಗಳು ಮಾಹಿತಿ ಪಡೆದರು. ಪಿಜಿಯಲ್ಲಿ ಆಕೆಯ ಪ್ರತಿಯೊಂದು ಚಲನಾವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಯುವತಿ ಹೇಳಿಕೆ ಮೇಲೆ ಮಾಲೀಕರಿಗೆ ಪ್ರಶ್ನೆ ಮಾಡಿದ್ದು, ಆಕೆ ಹೇಳಿದ್ದೆಲ್ಲವೂ ನಿಜವಾ ಎಂದು ಮಾಲೀಕರಿಂದಲೂ ಸ್ಪಷ್ಟನೆ ಪಡೆದಿದ್ದಾರೆ. ಯುವತಿ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಸಹ ಮಾಡಲಾಗಿದೆ. ಇದರ ಜತೆಗೆ ಹೇಳಿದ ಎಲ್ಲಾ ಹೇಳಿಕೆಯನ್ನು ಬರವಣಿಗೆ ಮೂಲಕವೂ ದಾಖಲಿಸಿಕೊಂಡು ಸಹಿ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net