ಸಿಡಿ ಲೇಡಿ ಉಳಿದುಕೊಂಡಿದ್ದ ಪಿಜಿಯಲ್ಲಿ ತನಿಖಾಧಿಕಾರಿಗಳು ಜಪ್ತಿ ಮಾಡಿದ ವಸ್ತುಗಳ್ಯಾವುವು?

CD Lady
Published on

ಬೆಂಗಳೂರು: ಸಿಡಿ ಲೇಡಿ ವಿಚಾರಣೆ ಮುಂದುವರಿದಿದ್ದು, ಇಂದು ಸಹ 'ಸಂತ್ರಸ್ತ' ಯುವತಿಯನ್ನು ಸ್ಥಳ ಮಹಜರಿಗೆ ಎಸ್​ಐಟಿ ಪೊಲೀಸರು ಕರೆದೊಯ್ಯುವ ಮೂಲಕ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಯುವತಿ ಉಳಿದುಕೊಂಡಿದ್ದ ಪಿಜಿಯಲ್ಲಿ ಎಸ್ಐಟಿ ತನಿಖಾಧಿಕಾರಿ ಎಸಿಪಿ ಕವಿತಾ ಅವರು ಪರಿಶೀಲನೆ ನಡೆಸಿದ್ದು, ಸ್ಥಳ ಮಹಜರು ಬಹುತೇಕ ಅಂತ್ಯವಾಗಿದೆ. ಈ ವೇಳೆ ವಿಡಿಯೋ ಕಾಲ್​ನಲ್ಲಿ ಯುವತಿ ಬಳಸಿದ್ದ ಉಡುಪುಗಳನ್ನು ಜಪ್ತಿ ಮಾಡಿದ್ದಾರೆ.

ಅತ್ಯಾಚಾರ ನಡೆದಿದೆ ಎನ್ನಲಾದ ದಿನ ಯುವತಿ ಧರಿಸಿದ್ದ ಒಳ ಉಡುಪು ಹಾಗೂ ಬಟ್ಟೆ ವಸ್ತ್ರಗಳನ್ನು ಜಪ್ತಿ ಮಾಡಿರುವ ಎಸ್​ಐಟಿ, ಬಟ್ಟೆಗಳನ್ನು ಎಫ್ಎಸ್ಎಲ್​ಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದೆ.

ಸ್ಥಳದಲ್ಲಿ ಯುವತಿಯ ಮಾಹಿತಿ ಸಂಗ್ರಹಿಸಿರುವ ತನಿಖಾಧಿಕಾರಿಗಳು ವಿಡಿಯೋ ಚಿತ್ರೀಕರಣದ ಮೂಲಕ ಯುವತಿಯ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಪಂಚರ ಸಮ್ಮುಖದಲ್ಲಿ ಎಲ್ಲಾ ಪ್ರಕ್ರಿಯೆ ನಡೆಸಿ ಎಸ್​ಐಟಿ ಅಧಿಕಾರಿಗಳು ಪಂಚನಾಮೆ ನಡೆಸಿದ್ದಾರೆ. ಸದ್ಯ ಪಿಜಿ ಮಾಲೀಕರಿಂದಲೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net