More

    ಜಿಲ್ಲಾ ನ್ಯಾಯಾಧೀಶರಿಗೆ, ಪದವೀಧರರಿಗೆ ಉತ್ತಮ ಅವಕಾಶ: ರಾಜ್ಯ ಗ್ರಾಹಕರ ಆಯೋಗದಲ್ಲಿ ನೇಮಕಾತಿ

    ಕರ್ನಾಟಕ ರಾಜ್ಯದಲ್ಲಿರುವ ವಿವಿಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ಅಧ್ಯಕ್ಷರು, ಸದಸ್ಯರು ಮತ್ತು ಮಹಿಳಾ ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
    ಒಟ್ಟು ಹುದ್ದೆಗಳು: 56

    ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧಿಸೂಚನೆ ಸಂಖ್ಯೆ ಕರಾಆ/ಆಡಳಿತ/09/2020 ದಿನಾಂಕ 11.5.2020ರಂದು ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ರದ್ದುಪಡಿಸಲಾಗಿತ್ತು. ಈಗ ಮತ್ತೆ ಅರ್ಜಿ ಆಹ್ವಾನಿಸಲಾಗಿದೆ. 2020ರಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕೂಡ ಈಗ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಹುದ್ದೆ ವಿವರ
    * ಅಧ್ಯಕ್ಷರು – 22
    ಬೆಂಗಳೂರು ನಗರ 2, 3, 4ನೇ ಹೆಚ್ಚುವರಿ, ಶಿವಮೊಗ್ಗ, ಹಾಸನ, ಬೆಳಗಾವಿ, ಯಾದಗಿರಿ, ಹಾವೇರಿ, ತುಮಕೂರು, ಕಲಬುರ್ಗಿ, ಮಂಡ್ಯ, ರಾಯಚೂರು, ಕೊಪ್ಪಳ, ಗದಗ, ಬಾಗಲಕೋಟೆ, ಉಡುಪಿ, ಬಳ್ಳಾರಿ, ಚಿತ್ರದುರ್ಗ, ದಕ್ಷಿಣ ಕನ್ನಡ, ಕೋಲಾರ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿನ ಆಯೋಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

    * ಸದಸ್ಯರು – 17
    ಬೆಂಗಳೂರು ನಗರ, ಬೆಂಗಳೂರು 2, 3, 4ನೇ ಹೆಚ್ಚುವರಿ, ಶಿವಮೊಗ್ಗ, ಬಳ್ಳಾರಿ, ಮೈಸೂರು, ಹಾವೇರಿ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಕೊಪ್ಪಳ, ಯಾದಗಿರಿ, ವಿಜಯಪುರ, ಕಲಬುರ್ಗಿಗಳ ಆಯೋಗದಲ್ಲಿ ಸದಸ್ಯರ ಹುದ್ದೆ ಖಾಲಿ ಇದೆ.

    * ಮಹಿಳಾ ಸದಸ್ಯರು – 17
    ಬೆಂಗಳೂರು ನಗರ 2, 3, 4ನೇ ಹೆಚ್ಚುವರಿ, ದಕ್ಷಿಣ ಕನ್ನಡ, ಹಾಸನ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ಗದಗ, ಕೊಪ್ಪಳ, ಯಾದಗಿರಿ, ಕೋಲಾರ, ಉಡುಪಿ ಜಿಲ್ಲಾ ಆಯೋಗಳಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ: ಅಧ್ಯಕ್ಷ ಹುದ್ದೆಗೆ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿರಬೇಕು/ ಜಿಲ್ಲಾ ನ್ಯಾಯಾಧೀಶರಾಗಲು ಅರ್ಹತೆ ಹೊಂದಿರಬೇಕು. ಸದಸ್ಯ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ವೃತ್ತಿ ಅನುಭವ ಅವಶ್ಯ.

    ನೇಮಕಾತಿ ವಿಧಾನ:
    ಗ್ರಾಹಕ ಸಂರಕ್ಷಣಾ ನಿಯಮ 2020ರ ಅನುಸಾರ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆಯನ್ನು ಮಾಡಲಾಗುವುದು. ಎರಡು ಹಂತದಲ್ಲಿ ಆಯ್ಕೆ ಮಾಡಲಾಗುವುದು. ಮೊದಲ ಹಂತದಲ್ಲಿ ವಸ್ತುನಿಷ್ಠ ಮಾದರಿ ಪರೀಕ್ಷೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮೌಖಿಕ ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ: ಅಭ್ಯರ್ಥಿಗಳು 250 ರೂ. ಶುಲ್ಕವನ್ನು ಆನ್‍ಲೈನ್ ಮೂಲಕ ಪಾವತಿಸಬೇಕು. ಒಂದುವೇಳೆ ಅಭ್ಯರ್ಥಿಗಳು ಈ ಹಿಂದೆ (11.2.2020ರ ಅಧಿಸೂಚನೆ ಅನ್ವಯ) ಅರ್ಜಿ ಶುಲ್ಕ ಪಾವತಿಸಿದ್ದರೆ ಅರ್ಜಿ ನಮೂನೆಯಲ್ಲಿರುವ `ವಿನಾಯಿತಿ’ ಕ್ಲಿಕ್ ಮಾಡಿ ಹಿಂದಿನ ಶುಲ್ಕ ಪಾವತಿಯ ಮಾಹಿತಿ ನೀಡಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 30.4.2021
    ಅಧಿಸೂಚನೆಗೆ: https://bit.ly/3fsQkMR
    ಮಾಹಿತಿಗೆ: https://kscdrc.kar.nic.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿವಿಧ ಇಂಜಿನಿಯರಿಂಗ್​ ಪದವೀಧರರಿಗೆ ಭರ್ಜರಿ ಅವಕಾಶ: ಕೇಂದ್ರ ಸರ್ಕಾರದ ಪವರ್​ಗ್ರಿಡ್​ನಲ್ಲಿ ಅರ್ಜಿ ಆಹ್ವಾನ

    ಪ್ರೊಫೆಸರ್​, ಲ್ಯಾಬ್​ ಅಸಿಸ್ಟೆಂಟ್​ ಆಕಾಂಕ್ಷಿಗಳಿಗೆ ಉತ್ತಮ ಅವಕಾಶ: ಇಂದು, ನಾಳೆ ಸಂದರ್ಶನ

    10ನೇ ತರಗತಿ ಪಾಸ್​ ಆಗಿದ್ದೀರಾ? ಹಾಗಿದ್ದರೆ ನರೇಗಾ ಯೋಜನೆ ಅಡಿ ಕಾಯಕಮಿತ್ರ ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts