More

    ಬಿಯರ್​ ಪ್ರೇಮಿಗಳಿಗೆ ಇಲ್ಲಿ ಸಿಕ್ತು ಭರ್ಜರಿ ಗುಡ್​ನ್ಯೂಸ್​- ವಿದೇಶಿ ಮದ್ಯಪ್ರಿಯರಿಗೆ ಸರ್ಕಾರ ನೀಡಿತು ಶಾಕ್​!

    ಲಖನೌ: ಕರೊನಾ ವೈರಸ್​ ಹಿನ್ನೆಲೆಯಲ್ಲಿ ಉಂಟಾದ ಲಾಕ್​ಡೌನ್​ನಿಂದಾಗಿ ಮದ್ಯದಂಗಡಿಗಳೆಲ್ಲಾ ಬಂದ್​ ಆಗಿದ್ದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ಭರ್ಜರಿ ನಷ್ಟ ಉಂಟಾಗಿತ್ತು. ಲಾಕ್​ಡೌನ್​ ತೆರವಿನ ನಂತರ ಯಥಾಸ್ಥಿತಿಗೆ ಮದ್ಯದಂಗಡಿಗಳು ಬಂದರೂ, ಕೆಲವು ರಾಜ್ಯಗಳಲ್ಲಿ ಪರಿಣಾಮ ಬೀರಿವೆ.

    ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಬಿಯರ್​ ದರದಲ್ಲಿ ಕೊಂಚ ಕಡಿಮೆ ಮಾಡಲಾಗಿದೆ. ಅಂದರೆ ಇಂದಿನಿಂದ ಅನ್ವಯ ಆಗುವಂತೆ 20 ರೂಪಾಯಿಗಳನ್ನು ಒಂದು ಬಿಯರ್​ ಬಾಟಲಿಗೆ ಕಡಿಮೆ ಮಾಡಲಾಗಿದೆ. ಅಬಕಾರಿ ಸುಂಕ ಮತ್ತು ಬಿಯರ್ ಪರವಾನಿಗೆ ಶುಲ್ಕದಲ್ಲಿ ಬದಲಾವಣೆ ಮಾಡಿಲ್ಲ. ಬಿಯರ್ ಬಳಕೆ ಹೆಚ್ಚಳ ಮಾಡುವ ಉದ್ದೇಶದಿಂದ ಬೆಲೆಯನ್ನು ಕಡಿಮೆ ಮಾಡಲಾಗಿದೆ.

    ಅಂದಹಾಗೆ ಈ ಬೆಲೆ ಕಡಿಮೆಯಾಗಿವುದು ಉತ್ತರಪ್ರದೇಶದಲ್ಲಿ. ಉತ್ತರ ಪ್ರದೇಶ ಸರ್ಕಾರದ ಹೊಸ ಅಬಕಾರಿ ನೀತಿ ಇಂದಿನಿಂದ ಜಾರಿಗೆ ಬಂದಿದ್ದು, ಬಿಯರ್ ಬೆಲೆ ಕಡಿಮೆಯಾಗಿದೆ. ಈ ರಾಜ್ಯದಲ್ಲಿ ಇದು ಯಶಸ್ವಿಯಾದರೆ ಬೇರೆ ರಾಜ್ಯಗಳಿಗೂ ಇದನ್ನು ಅನ್ವಯ ಮಾಡುವ ದಿನಗಳು ದೂರವಿಲ್ಲ.

    ಕರೊನಾದಿಂದಾಗಿ ಬಿಯರ್ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ. ಬಿಯರ್ ಬಳಕೆಗೆ ಉತ್ತೇಜನ ನೀಡಲು ಈ ಕ್ರಮಕೈಗೊಳ್ಳಲಾಗಿದೆ. ಶೇಕಡ 30 ರಷ್ಟು ಮಾರಾಟ ಕುಸಿತವಾಗಿತ್ತು. ಹೀಗಾಗಿ ಚಿಲ್ಲರೆ ಅಂಗಡಿಗಳ ವಾರ್ಷಿಕ ಪರವಾನಿಗೆ ಶುಲ್ಕ ಬದಲಾವಣೆಗೆ ಉತ್ತರಪ್ರದೇಶ ಸರ್ಕಾರ ಕ್ರಮಕೈಗೊಂಡಿದೆ ಎಂದು ಉತ್ತರ ಪ್ರದೇಶದ ಅಬಕಾರಿ ಇಲಾಖೆ ಹೇಳಿದೆ.

    ಸದ್ಯ ಉತ್ತರಪ್ರದೇಶದ ನೆರೆ ರಾಜ್ಯಗಳಾದ ದೆಹಲಿ, ಹರಿಯಾಣ, ಪಂಜಾಬ್ ಗಳಿಗಿಂತ ಉತ್ತರಪ್ರದೇಶದಲ್ಲಿ ಬಿಯರ್ ಚಿಲ್ಲರೆ ಮಾರಾಟದ ದರ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿ ಬಿಯರ್ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ಅದು ಸ್ಪಷ್ಟನೆ ನೀಡಿದೆ.

    ಆದರೆ ಇದೇ ವೇಳೆ ವಿದೇಶಿ ಮದ್ಯದ ಬೆಲೆಯನ್ನು ಹೆಚ್ಚು ಮಾಡಲಾಗಿದೆ. ವಿವಿಧ ಬ್ರಾಂಡ್‌ಗಳ ವಿದೇಶಿ ಮದ್ಯದ ಬೆಲೆಯನ್ನು ಶೇಕಡಾ 15 ರಿಂದ 20 ರಷ್ಟು ಹೆಚ್ಚಿಸಲಾಗಿದೆ ಎಂದು ಅಬಕಾರಿ ಇಲಾಖೆ ಹೇಳಿದೆ.

    ಬಿಜೆಪಿ ಸಂಸದೆ, ನಟಿ ಕಿರಣ್​ ಖೇರ್ ಜನತೆ ಮುಂದೇಕೆ ಕಾಣಿಸಿಕೊಳ್ಳುತ್ತಿಲ್ಲ? ಪಕ್ಷ ನೀಡಿದೆ ನೋಡಿ ಈ ಉತ್ತರ…

    ಒಂದೆಡೆ ಪ್ರೀತಿಯ ಹುಡುಗ… ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ… ಗೊಂದಲದ ಮನಕೆ ದಾರಿ ತೋರಿ ಮೇಡಂ…

    ರಾಜಕೀಯ ಜೀವನದಲ್ಲಿ ಇದು ಈಶ್ವರಪ್ಪ ಮಾಡಿದ ಮೊದಲ ಒಳ್ಳೆ ಕೆಲಸವಂತೆ!

    ಮುಖ್ಯಮಂತ್ರಿಯನ್ನು ಕಟ್ಟಿಹಾಕಲು ನಡೀತಿದೆ ಕೈ ನಾಯಕರ ಮಹತ್ವದ ಸಭೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts