More

    ಬಿಜೆಪಿ ಸಂಸದೆ, ನಟಿ ಕಿರಣ್​ ಖೇರ್ ಜನತೆ ಮುಂದೇಕೆ ಕಾಣಿಸಿಕೊಳ್ಳುತ್ತಿಲ್ಲ? ಪಕ್ಷ ನೀಡಿದೆ ನೋಡಿ ಈ ಉತ್ತರ…

    ನವದೆಹಲಿ: ಚಂಡೀಗಢ ಕ್ಷೇತ್ರದ ಬಿಜೆಪಿ ಸಂಸದೆಯಾಗಿರುವ, ನಟಿ ಕಿರಣ್​ ಖೇರ್​ ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. 68 ವರ್ಷದ ಕಿರಣ್​ ಖೇರ್​ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅರುಣ್​ ಸೂದ್​ ತಿಳಿಸಿದ್ದಾರೆ.

    ಕಿರಣ್​ ಅವರು ಖ್ಯಾತ ನಟ ಅನುಪಮ್​ ಖೇರ್​ ಅವರ ಪತ್ನಿ. ಕಿರಣ್​ ಅವರಿಗೆ ಮಲ್ಟಿಪಲ್​ ಮೈಲೋಮಾದಿಂದ ಬಳಲುತ್ತಿದ್ದು, ಇದು ಒಂದು ರೀತಿಯ ರಕ್ತದ ಕ್ಯಾನ್ಸರ್​ ಆಗಿದೆ. ಕಳೆದ ವರ್ಷದಿಂದ ಅವರು ಈ ಕ್ಯಾನ್ಸರ್​ಗೆ ಚಿಕಿತ್ಸೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಸಂಸದೆಯಾಗಿರುವ ಕಿರಣ್​ ಖೇರ್​ ಜನರಿಗೆ ಕಾಣಿಸಿಕೊಳ್ಳುತ್ತಿಲ್ಲ, ಕ್ಷೇತ್ರದತ್ತ ಬರುತ್ತಿಲ್ಲ ಎಂದು ಜನರು ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದೀಗ ಈ ಸ್ಪಷ್ಟನೆ ನೀಡಿದ್ದಾರೆ. ಕೆಲವು ಕಡೆ ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರು ಸಂಸದೆಯ ಬಗ್ಗೆ ಆಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಮಾಹಿತಿಯನ್ನು ಅರುಣ್​ ಸೂದ್​ ನೀಡಿದ್ದಾರೆ.

    ಕಳೆದ ವರ್ಷದ ನವೆಂಬರ್​ನಲ್ಲಿ ಕಿರಣ ಖೇರ್​ ಅವರಿಗೆ ಅಪಘಾತ ಒಂದರಲ್ಲಿ ಕೈ ಮುರಿದುಹೋಗಿತ್ತು. ಆ ಸಮಯದಲ್ಲಿ ಅವರು ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಈ ಪರೀಕ್ಷೆ ಮಾಡುವಾಗಲೇ ಅವರಿಗೆ ಕ್ಯಾನ್ಸರ್​ ಇರುವುದು ತಿಳಿದು ಬಂದಿದೆ. ಆದರೆ ಅದಾಗಲೇ ಕ್ಯಾನ್ಸರ್​ ಅವರ ಎಡಗೈ ಮತ್ತು ಬಲ ಭುಜಕ್ಕೆ ಹರಡಿತ್ತು ಎಂದು ಸೂದ್​ ಹೇಳಿದ್ದಾರೆ.

    ಖೇರ್​ ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಅವರು ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು ವಾರಕ್ಕೆ ಒಮ್ಮೆ ಅವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಅವರು ನಿರಂತರ ಚಿಕಿತ್ಸೆಯಲ್ಲಿರುವುದರಿಂದ ನಾವು ಚಂಡೀಗಢ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಕಾಳಜಿಗೆ ಬದ್ಧವಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
    2014ರಲ್ಲಿ ರಾಜಕೀಯಕ್ಕೆ ಧುಮುಕಿದ ಕಿರಣ್​ ಖೇರ್​, ಎರಡನೇ ಬಾರಿ ಸಂಸದೆಯಾಗಿದ್ದಾರೆ.

    ರಾಜಕೀಯ ಜೀವನದಲ್ಲಿ ಇದು ಈಶ್ವರಪ್ಪ ಮಾಡಿದ ಮೊದಲ ಒಳ್ಳೆ ಕೆಲಸವಂತೆ!

    ಒಂದೆಡೆ ಪ್ರೀತಿಯ ಹುಡುಗ… ಇನ್ನೊಂದೆಡೆ ಆಣೆ ಮಾಡಿಸಿಕೊಂಡ ಅಣ್ಣ… ಗೊಂದಲದ ಮನಕೆ ದಾರಿ ತೋರಿ ಮೇಡಂ…

    ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಉಯಿಲು ಬರೆದರೆ ಅದು ಮಾನ್ಯವಾಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts