More

    ಬೇಸಿಗೆಯಲ್ಲಿ ನೀವು ಮಾಡುವ ಈ ಒಂದು ಮಿಸ್ಟೇಕ್​ನಿಂದ ಕ್ಯಾನ್ಸರ್​ ಬರುವ ಸಾಧ್ಯತೆ ಇದೆ ಎಚ್ಚರ!

    ಮಾನವನ ಜೀವನದಲ್ಲಿ ನೀರು ಅತಿ ಮುಖ್ಯವಾದ ಮೂಲವಾಗಿದೆ. ಜಗತ್ತು ಮುಂದುವರಿದಂತೆ ನೀರು ಬಳಸುವ ವಿಧಾನ ಬದಲಾಗುತ್ತಿದೆ. ಹಿಂದೆ ಮಣ್ಣಿನ ಮಡಿಕೆಗಳನ್ನು ಬಳಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಈ ತಂತ್ರಜ್ಞಾನದ ಯುಗದಲ್ಲಿ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮಗಳಲ್ಲೂ ಜನರು ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲ್​ಗಳನ್ನು ಅವಲಂಬಿಸಿದ್ದಾರೆ. ಆದರೆ, ಇದು ಆರೋಗ್ಯಕ್ಕೆ ತುಂಬಾ ಡೇಂಜರ್​.

    ವಿಪರೀತ ಬಿಸಿಲಿಗೆ ಒಡ್ಡಿಕೊಂಡ ಬಾಟಲ್ ನೀರನ್ನು ಕುಡಿದರೆ ಕ್ಯಾನ್ಸರ್ ಸೇರಿದಂತೆ ಮಾರಕ ರೋಗಗಳು ಬರುವುದು ಖಚಿತ ಎನ್ನುತ್ತಾರೆ ಆರೋಗ್ಯ ತಜ್ಞರು. ಆಗಾಗ ವಾಹನಗಳಲ್ಲಿ ಅಂಗಡಿಗಳಿಗೆ ಬಾಟಲ್​ಗಳಲ್ಲಿ ನೀರು ಮತ್ತು ತಂಪು ಪಾನೀಯಗಳನ್ನು ತರುವುದೇ ಪ್ರಮುಖ ಸಮಸ್ಯೆಯಾಗಿದೆ. ವಿಪರೀತ ಶಾಖದಿಂದಾಗಿ ಬಾಟಲಿಯಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಯೇ ನಮ್ಮ ದೇಹಕ್ಕೆ ಪ್ರಮಖ ವಿಲನ್ ಎಂಬುದು ತಜ್ಞರ ಎಚ್ಚರಿಕೆಯಾಗಿದೆ.

    ಸೂರ್ಯನ ಶಾಖದಿಂದ ಕೊಂಚ ಬಿಸಿಯಾದ ಬಾಟಲ್​ ನೀರನ್ನು ತ್ವರಿತವಾಗಿ ಫ್ರಿಡ್ಜ್​ನಲ್ಲಿ ಇಟ್ಟಾಗ​ ತಂಪಾಗುತ್ತದೆ. ಆದರೆ, ಇದು ತುಂಬಾ ಡೇಂಜರ್​. ಕೆಮಿಕಲ್​ ರಿಯಾಕ್ಷನ್​ನಿಂದ ನೀರಿನ ಮೂಲಕ ಕೆಮಿಕಲ್ಸ್​ ರಕ್ತವನ್ನು ಸೇರಿದಾಗ ಅನೇಕ ರೋಗಗಳು ಬರುತ್ತವೆ. ನಿತ್ಯವೂ ಬಾಟಲಿ ನೀರು ಕುಡಿಯುವವರು ತುಂಬಾ ಜಾಗರೂಕರಾಗಿರಬೇಕು ಎನ್ನುತ್ತಾರೆ ತಜ್ಞರು.

    ಪ್ಲಾಸ್ಟಿಕ್ ಮತ್ತು ಅಂಟುಗಳು
    ನೀರಿನ ಬಾಟಲಿಗಳನ್ನು ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ವರ್ಗದ ಪ್ಲಾಸ್ಟಿಕ್ ಬಳಸಿ ತಯಾರಿಸಲಾಗುತ್ತದೆ. ಬಾಟಲ್ ತಯಾರಿಕೆಯಲ್ಲಿ ಭಾರಿ ಲಾಭ ಗಳಿಸುವ ಉದ್ದೇಶದಿಂದ ಕಡಿಮೆ ಗುಣಮಟ್ಟದ ರಾಸಾಯನಿಕಗಳನ್ನು ಪಿಇಟಿಗೆ ಸೇರಿಸಲಾಗುತ್ತದೆ. ಇದು ಶುದ್ಧ ಪ್ಲಾಸ್ಟಿಕ್ ಆಗಿದ್ದರೂ, ಬಿಸಿ ಮಾಡಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಬಾಟಲಿ ನೀರು ಬಿಸಿಲಿಗೆ ತೆರೆದುಕೊಂಡಾಗ ಬಿಸಿಯಾದ ಪ್ಲಾಸ್ಟಿಕ್, ನೀರಿನಲ್ಲಿ ಕೊಂಚ ಕರಗುತ್ತದೆ. ಆದರೆ, ಇದು ಮೇಲ್ನೋಟಕ್ಕೆ ಕಾಣುವುದಿಲ್ಲ. ಇನ್ನು ಬಾಟಲಿಯ ಹೊರಭಾಗದಲ್ಲಿ ಪಾಲಿಥೀನ್ ಲೇಬಲ್ ಅನ್ನು ಅಂಟಿಸಲು ಬಳಸುವ ಅಂಟು ಕೂಡ ಅಪಾಯಕಾರಿಯಾಗಿದೆ. ಬಿಸಿಲಿಗೆ ಬಿಸಿಯಾದಾಗ ಅಂಟು ಸ್ವಲ್ಪ ನೀರನ್ನು ಹೀರಿಕೊಳ್ಳುತ್ತದೆ.

    ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳನ್ನು ಸೂರ್ಯನ ಶಾಖಕ್ಕೆ ಒಡ್ಡಿದಾಗ ಡೈಯಾಕ್ಸಿನ್ ಎಂಬ ಕೆಮಿಕಲ್​ ಬಿಡುಗಡೆ ಮಾಡುತ್ತವೆ. ಇದು ಹಾನಿಕಾರಕ ವಿಷವಾಗಿದ್ದು, ಇದನ್ನು ಸೇವಿಸಿದರೆ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಅಲ್ಲದೆ, ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳಿಂದ ನೀರು ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹಾಳಾಗುತ್ತದೆ. ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ರಾಸಾಯನಿಕಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತವೆ. ಹೀಗಾಗಿ ಆದಷ್ಟು ಪ್ಲಾಸ್ಟಿಕ್​ಗೆ ಅವಲಂಬನೆಯಾಗುವುದನ್ನು ತಪ್ಪಿಸಬೇಕು. (ಏಜೆನ್ಸೀಸ್​)

    ಕುಡಿಯೋ ನೀರಿಗಾಗಿ 20 ಲೀಟರ್ ಪ್ಲಾಸ್ಟಿಕ್​ ಕ್ಯಾನ್‌ ಬಳಸುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts