More

    ಜೆಜೆಎಂ ಕುಡಿಯುವ ನೀರು ಜಮೀನಿಗೆ ಬಳಕೆ; ಕೊಡತಗೇರಿ ನಿವಾಸಿಗಳ ಆಕ್ರೋಶ

    ಹನುಮಸಾಗರ: ಜೆಜೆಎಂನ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವಂತೆ ಒತ್ತಾಯಿಸಿ ಸಮೀಪದ ಕೊಡತಗೇರಿ ಗ್ರಾಮದ ನಿವಾಸಿಗಳು ಬಿಳೇಕಲ್ಲ ಗ್ರಾಪಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದರು.

    6 ತಿಂಗಳಿಂದ ಜೆಜೆಎಂ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜೆಜೆಎಂ ನೀರಿನ ಪೈಪ್‌ಲೈನ್ ರಂಗಾಪುರ ಗ್ರಾಮದಲ್ಲಿ ಪದೇ ಪದೆ ದುರಸ್ಥಿಯಾಗುತ್ತಿದೆ. ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಮೀನಿಗೆ ಈ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಮೀನಿಗೆ ಬಳಕೆ ಮಾಡುತ್ತಿರುವ ಮಾಲೀಕರೆ ಪೈಪ್‌ಲೈನ್ ಹಾಳು ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಈ ಬಗ್ಗೆ ಜಿಪಂ ಸಿಇಒ, ತಾಪಂ ಇಒ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದರು ಸ್ಪಂದಿಸುತ್ತಿಲ್ಲವಾದ್ದರಿಂದ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದ್ದು, ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಗ್ರಾಮಸ್ಥರಾದ ಗಂಗಪ್ಪ ನೆಲ್ಲೂರ, ಶರಣಪ್ಪ ಆಡಿನ, ಶರಣಪ್ಪ ದ್ಯಾಮಣ್ಣವರ, ದೇವೇಂದ್ರಪ್ಪ ಉಣಚಗೇರಿ, ಬರಮ್ಮಲಿಂಗಪ್ಪ ದ್ಯಾಮಣ್ಣವರ, ಮಲ್ಲಪ್ಪ ಗೌಡ್ರ, ನೀಲಪ್ಪ ಹಟ್ಟಿ, ಮಂಜುನಾಥ ಮುಶಿಗೇರಿ, ಶರಣಪ್ಪ ದ್ಯಾಮಣ್ಣವರ, ಕಲ್ಲಪ್ಪ ಪೂಜಾರ, ಪರಸಪ್ಪ ಪಿಳಬಂಟರ, ಶಿವಲೀಲಾ ಹಿರೇಮಠ, ಮುತ್ತವ್ವ ನೆಲ್ಲೂರ, ಬಸಮ್ಮ ಕುರಟ್ಟಿ, ಮುತ್ತವ್ವ ಪಿಳಬಂಟರ, ಹನುಮವ್ವ ಕುರಟ್ಟಿ, ಶಾಂತವ್ವ ಪೋಲೆಷಿ, ಶಿವಬಸಮ್ಮ ಹಿರೇಮಠ, ಮಂಜುನಾಥ ದ್ಯಾಮಣ್ಣವರ, ನಿಂಗರಾಜ್ ಅಣ್ಣಿಗೇರಿ ಇತರರಿದ್ದರು.

    ಹನುಮಸಾಗರ ಸಮೀಪದ ಕೊಡತಗೇರಿ ಗ್ರಾಮಸ್ಥರು ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಬಿಳೇಕಲ್ಲ ಗ್ರಾಪಂಗೆ ಮಂಗಳವಾರ ಮುತ್ತಿಗೆ ಹಾಕಿದರು.

    ಒತ್ತಡ ಹೆಚ್ಚಾಗಿದ್ದರಿಂದ ರಂಗಾಪುರ ಗ್ರಾಮದಲ್ಲಿ ಜೆಜೆಎಂನ ಪೈಪ್‌ಲೈನ್ ಪದೇ ಪದೆ ದುರಸ್ಥಿಯಾಗುತ್ತಿದೆ. ಒಂದು ವಾಲ್ ಅಳವಡಿಕೆ ಅವಶ್ಯಕವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಗತ್ಯ ಕ್ರಮಕೈಗೊಳ್ಳಲಾಗುವುದು.
    | ವಿಜಯಕುಮಾರ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts