More

    ಕುಡಿವ ನೀರು ಪೂರೈಕೆಗೆ ಆದ್ಯತೆ ನೀಡಿ,ಡಿಸಿ ನಲಿನ್​ ಅತುಲ್​ ಸೂಚನೆ

    ಕೊಪ್ಪಳ: ಸದ್ಯ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿಲ್ಲ. ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಪರಿಹಾರ ಕಲ್ಪಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ತಮ್ಮ ಕಚೇರಿಯಲ್ಲಿ ಬರ ನಿರ್ವಣೆ ಕುರಿತು ಶನಿವಾರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.

    ಜಿಲ್ಲೆಯಲ್ಲಿ 430 ಗ್ರಾಮಗಳಿಗೆ ಡಿಬಿಒಟಿ, ಎಂವಿಎಸ್​ ಯೋಜನೆಯಡಿ ನೀರು ಒದಗಿಸಲಾಗುತ್ತಿದೆ. 2,334 ಸರ್ಕಾರಿ ಮತ್ತು 6,366 ಖಾಸಗಿ ಬೋರ್​ವೆಲ್​ಗಳಿದ್ದು, 898 ಖಾಸಗಿ ಬೋರ್​ವೆಲ್​ಗಳನ್ನು ಬಳಕೆಗೆ ಗುರುತಿಸಲಾಗಿದೆ. 150 ಮಾಲೀಕರಿಂದ ಕರಾರು ಪತ್ರ ಮಾಡಿಸಿಕೊಳ್ಳಲಾಗಿದೆ. ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ನಿಲೋಗಿಪುರ ಜಾಕ್​ವೆಲ್​ನಲ್ಲಿ 0.0357 ಟಿಎಂಸಿ ಅಡಿ ನೀರು ಸಂಗ್ರಹಿಸಲಾಗಿದೆ. ಇಲ್ಲಿಂದ ಕೊಪ್ಪಳ ತಾಲೂಕಿನ ಅಳವಂಡಿ, ಕಂಪ್ಲಿ, ಗಟ್ಟಿರೆಡ್ಡಿಹಾಳ, ಗುಡಗೇರಿ, ಕೆಸಲಾಪುರ, ಹಲವಾಗಲಿ, ನಿಲೋಗಿಪುರ, ಭೈರಾಪುರ, ಹಟ್ಟಿ, ಹೈದರನಗರ, ರಘುನಾಥನಹಳ್ಳಿ, ಬೆಳಗಟ್ಟಿ, ಮುರ್ಲಾಪುರ ಮತ್ತು ಕವಲೂರ, ಕುಕನೂರ ತಾಲೂಕಿನ ಬನ್ನಿಕೊಪ್ಪ, ಮನ್ನಾಪುರ, ನಿಂಗಾಪುರ, ಮಳೆಕೊಪ್ಪ, ಮಂಡಲಗಿರಿ, ಕುಕನೂರು, ದ್ಯಾಂಪುರ, ಆಡೂರು, ರಾಜೂರು, ಮಸಬಹಂಚಿನಾಳ, ತಳಕಲ್​, ತಳಬಾಳ, ಲಕಮಾಪುರ, ಕುಂಬಳಾಪುರ, ಚಿತ್ತಾಪುರ ಮತ್ತು ಇಟಗಿ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ ಎಂದರು.

    32 ಗ್ರಾಪಂಗಳಲ್ಲಿ ಕುಡಿವ ನೀರಿನ ಸಮಸ್ಯೆಯಾಗಿದೆ. ಕೊಪ್ಪಳ, ಕುಕನೂರು ತಾಲೂಕಿನ 4 ಗ್ರಾಮಗಳಲ್ಲಿ 5 ಟ್ಯಾಂಕರ್​ನಿಂದ ನಿತ್ಯ 45 ಟ್ರಿಪ್​ಗಳಲ್ಲಿ ನೀರು ನೀಡಲಾಗುತ್ತಿದೆ. 48 ಗ್ರಾಮಗಳಲ್ಲಿ 55 ಖಾಸಗಿ ಬೋರ್​ವೆಲ್​ಗಳನ್ನು ಬಾಡಿಗೆ ಪಡೆಯಲಾಗಿದೆ. ಟ್ಯಾಂಕರ್​ ನೀರು ಪೂರೈಕೆಗೆ 25 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ತಹಸೀಲ್ದಾರ್​ಗಳ ಖಾತೆಯಲ್ಲಿ 50 ಲಕ್ಷ ರೂ. ಕಾಯ್ದಿರಸಲಾಗಿದೆ. ಡಿಸಿ ಪಿಡಿ ಖಾತೆಯಲ್ಲಿ 19.55 ಕೋಟಿ ರೂ., ಪ್ರತಿ ಸ್ಥಳಿಯ ಸಂಸ್ಥೆಗಳಲ್ಲಿ 20 ರಿಂದ 30 ಲಕ್ಷ ರೂ. ಕುಡಿವ ನೀರಿಗಾಗಿ ತೆಗೆದಿರಿಸಲಾಗಿದೆ. ಕಳೆದೊಂದು ವಾರದಲ್ಲಿ 6 ಮಿ.ಮೀ. ಮಳೆಯಾಗಿದೆ. 5,45,380.97 ಮೆಟ್ರಿಕ್​ ಟನ್​ ಮೇವು ಲಭ್ಯವಿದೆ. ಅರ್ಹ ರೈತರಿಗೆ ಮೇವು ಕಿಟ್​ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ರೈತರಿಗೆ ಇನ್​ಪುಟ್​ ಸಬ್ಸಡಿ ವಿತರಿಸಲಾಗಿದೆ. ಕುಡಿವ ನೀರು, ಮೇವು ಸೇರಿ ಬರ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ ಆರಂಭಿಸಲಾಗಿದೆ. ಈವರೆಗೆ 389 ದೂರುಗಳು ಬಂದಿದ್ದು, 385ಕ್ಕೆ ಪರಿಹಾರ ಕಲ್ಪಿಸಿದ್ದು, ನಾಲ್ಕು ಬಾಕಿ ಇವೆ. 242 ಪೈಪ್​ಲೈನ್​ ದುರಸ್ಥಿ, 106 ಕುಡಿವ ನೀರು ಒದಗಿಸುವುದು, 41 ಮೋಟಾರ್​ ದುರಸ್ಥಿ ಮಾಡಿಸುವಂತೆ ದೂರುಗಳು ಬಂದಿದ್ದವು. ಬರ ನಿರ್ವಹಣೆಗೆ, ತಾಲೂಕು, ಗ್ರಾಪಂ ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಎಲ್ಲ ಅಧಿಕಾರಿಗಳು ನಿಗದಿತವಾಗಿ ಸಭೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಎಂದು ತಾಕೀತು ಮಾಡಿದರು. ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಇದ್ದರು.

    ಸಹಾಯವಾಣಿ ಸಂಖ್ಯೆಗಳು
    ಜಿಲ್ಲಾಧಿಕಾರಿ ಕಚೇರಿ: 7676732001, ಕೊಪ್ಪಳ ತಾಲೂಕು ಕಚೇರಿ: 9380252346, ಯಲಬುರ್ಗಾ:9448833207, ಕುಷ್ಟಗಿ : 9845791349, ಕನಕಗಿರಿ:9900433012, ಕುಕನೂರು:8050303495, ಗಂಗಾವತಿ:9740793877, ಕಾರಟಗಿ:9743600343. ಸ್ಥಳಿಯ ಸಂಸ್ಥೆಗಳ ಸಂಖ್ಯೆಗಳು ಕೊಪ್ಪಳ: 08539-230192, ಭಾಗ್ಯನಗರ: 08539-230243, ಕುಕನೂರು: 8197396725, 8431363187, ಯಲಬುರ್ಗಾ: 9880524225, 9743277571, ಕುಷ್ಟಗಿ: 08536-267041, ತಾವರಗೇರಾ: 990057212, 8971014351, ಕಾರಟಗಿ: 08533-274232, ಕನಕಗಿರಿ: 8951133577, ಗಂಗಾವತಿ: 08533-230240, 8050428081 ಇದ್ದು, ಸಾರ್ವಜನಿಕರು ಸಮಸ್ಯೆಗಳಿದ್ದಲ್ಲಿ ಕರೆ ಮಾಡಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಡಿಸಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts