PHOTOS! 45ರ ಹರೆಯದಲ್ಲೂ ಬಿಕಿನಿ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿದ "ಓ ನನ್ನ ನಲ್ಲೆ"!

Isha
Published on

ಮುಂಬೈ: ಸೂರ್ಯವಂಶ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ಇಶಾ ಕೊಪ್ಪಿಕರ್​, ಅನೇಕ ವರ್ಷಗಳ ಬಳಿಕ ಶಿವರಾಜ್​ ಕುಮಾರ್​ ನಟನೆಯ ಕವಚ ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರು.

ಕನ್ನಡದಲ್ಲಿ ಅಭಿನಯಿಸಿದ್ದು ಬೆರಳಣಿಕೆ ಚಿತ್ರವಾದರು ಸಹ ಇಶಾ ಪರಿಚಯ ಕನ್ನಡಿಗರಿಗಿದೆ. ಅದಕ್ಕೆ ಕಾರಣ ಸೂರ್ಯವಂಶ ಹಾಗೂ ರವಿಚಂದ್ರನ್​ ಅಭಿನಯದ ಓ ನನ್ನ ನಲ್ಲೆ ಚಿತ್ರದಲ್ಲಿನ ಅವರ ಅಮೋಘ ಅಭಿನಯ.

ಅನೇಕ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಇಶಾ ಸದ್ಯ ತಮಿಳಿನ ಅಯಲಾನ್​ ಮತ್ತು ಹಿಂದಿ ಅಸ್ಸಿ ನಬೆ ಪೂರೆ ಸೌ ಚಿತ್ರದಲ್ಲಿ ನಟಿಸಿದ್ದು ಬಿಡುಗಡೆ ಆಗಬೇಕಿದೆ. ಸದ್ಯ ಇಶಾ ಅವರು ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ.

ಇದು ಮಾಮೂಲಿ ಫೋಟೋಶೂಟ್​ ಅಲ್ಲ. 45 ವರ್ಷದ ಇಶಾ ಅವರು ಈ ವಯಸ್ಸಿನಲ್ಲೂ ಮಾದಕ ಫೋಟೋಶೂಟ್​ ಮಾಡಿಸಿದ್ದಾರೆ. ಬಿಕಿನಿ ಉಡುಗೆಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ್ದು, ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹಚ್ಚಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇಶಾ ಅವರ ಮಾದಕ ಫೋಟೋಗಳು ವೈರಲ್​ ಆಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net