ಯುವತಿ ಹೇಳಿಕೆ ಕೊಟ್ಟು 3 ದಿನ ಕಳೆದ್ರು ರಮೇಶ್ ಜಾರಕಿಹೊಳಿ ಮೌನ: ಇಂದು ಕಾಣಿಸಿಕೊಳ್ತಾರಾ ಸಾಹುಕಾರ್?

Ramesh-Web
Published on

ಬೆಂಗಳೂರು: ಅಶ್ಲೀಲ ಸಿಡಿ ಕೇಸ್ ಪ್ರಕರಣದಲ್ಲಿ ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ವಿಚಾರಣೆ ನಡೆಸಲು ಎಸ್​ಐಟಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ. ಬಂಧನ ಭೀತಿ ಹಿನ್ನೆಲೆ‌ಯಲ್ಲಿ ಮಾಜಿ ಸಚಿವರ ವಿಚಾರಣೆಗೆ ಹಾಜರಾಗುತ್ತಾರಾ ಎಂಬುದು ಕಾದು ನೋಡಬೇಕಿದೆ.

ಗುರುವಾರ ಎಸ್​ಐಟಿ ಅಧಿಕಾರಿಗಳು, ಸಂತ್ರಸ್ತ ಯುವತಿ ಸಮ್ಮುಖದಲ್ಲಿ 8 ಗಂಟೆಗಳ ಕಾಲ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದರು. ಶುಕ್ರವಾರ ಮತ್ತೆ ಯುವತಿ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಯುವತಿ ಮತ್ತೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ. ಮೊದಲು ಯುವತಿ ವಿಚಾರಣೆ ನಡೆಸಿದ ಬಳಿಕ ಮಾಜಿ ಸಚಿವರ ಹೇಳಿಕೆ ದಾಖಲಿಸಿಕೊಳ್ಳಲು ತನಿಖಾಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ರಮೇಶ್​ ಜಾರಕಿಹೊಳಿಗೆ ಏ.2ರಂದು ವಿಚಾರಣೆಗೆ ಬರುವಂತೆ ಎಸ್​ಐಟಿ ನೋಟೀಸ್ ನೀಡಿದೆ. ಆದರೆ ಸದ್ಯ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ರಮೇಶ್ ಜಾರಕಿಹೊಳಿ ವಿಚಾರಣೆಗೆ ಬರುವುದೇ ಡೌಟ್ ಎಂಬ ಮಾತು ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net