ಹಾಸನ: ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಮಹಿಳಾ ಪ್ರಾಂಶುಪಾಲರೊಬ್ಬರು ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದು, ಗುರು-ಶಿಷ್ಯರ ಸಂಬಂಧಕ್ಕೆ ಮಸಿ ಬೆಳೆದಿದ್ದಾರೆ.
ಉದ್ದೇಶ ಪೂರ್ವಕವಾಗಿಯೇ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆಯ ಉತ್ತರಗಳನ್ನು ವಿರೂಪಗೊಳಿಸಿದ ಆರೋಪ ಕೇಳಿಬಂದಿದ್ದು, ಈ ಘಟನೆ ಹಾಸನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ.
ಈ ಸಂಬಂಧ ಪ್ರಾಂಶುಪಾಲೆ ಶೋಭಾದೇವಮಾನೆ ವಿರುದ್ಧ ಹಾಸನ ಬಡಾವಣೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನೊಂದ ವಿದ್ಯಾರ್ಥಿ ಚನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಕಾಲೇಜಿನ ಇತರೆ ವಿದ್ಯಾರ್ಥಿಗಳು ಹೇಳಿದಂತೆ ಚನ್ನಯ್ಯ ಒಳ್ಳೆಯ ವಿದ್ಯಾರ್ಥಿ. ಆತ ರ್ಯಾಂಕ್ ವಿದ್ಯಾರ್ಥಿ ಆಗಿದ್ದ. ಆದರೆ, ತಾನು ಫೇಲ್ ಎಂದು ತಿಳಿದಾಗ ತುಂಬಾ ವಿಚಲಿತನಾಗಿದ್ದ. ಬಳಿಕ ತನ್ನ ಮೇಲಿನ ಅಚಲ ನಂಬಿಕೆಯಿಂದ ಏನೋ ತಪ್ಪು ನಡೆದಿದೆ ಎಂಬ ಸಂಶಯದಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಉತ್ತರ ಪತ್ರಿಕೆ ತರಿಸಿ ನೋಡಿದಾಗ ಪ್ರಕರಣ ಬಯಲಾಗಿದೆ.
ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಮಾಡಿ ಕಳಿಸುವಾಗ ಜೂನಿಯರ್ ವಿದ್ಯಾರ್ಥಿಯಿಂದ ಶೋಭಾ ದೇವಮಾನೆ ಕೃತ್ಯ ಎಸಗಿದ್ದಾರೆ. ಪ್ರಿನ್ಸಿಪಾಲ್ ಆದೇಶದಂತೆ ಈ ಕೃತ್ಯ ಎಸಗಿದ್ದಾಗಿ ಆರೋಪಿ ವಿದ್ಯಾರ್ಥಿ ಈಗಾಗಲೇ ಒಪ್ಪಿಕೊಂಡಿದ್ದಾನೆ. (ದಿಗ್ವಿಜಯ ನ್ಯೂಸ್)
ನಯನತಾರಾ-ಉದಯನಿಧಿ ಸ್ಟಾಲಿನ್ ನಡುವೆ ರಹಸ್ಯ ಸಂಬಂಧ? ಹಿರಿಯ ನಟನ ಸ್ಫೋಟಕ ಹೇಳಿಕೆ!