More

    ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸರ ಆಹಾರ ಭತ್ಯೆ ಏರಿಕೆ

    ಬೆಂಗಳೂರು: ಚುನಾವಣೆ, ಹಬ್ಬಹರಿದಿನ, ಪ್ರತಿಭಟನೆ ಸೇರಿದಂತೆ ವಿಶೇಷ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ನೀಡಲಾಗುತ್ತಿದ್ದ ಆಹಾರ ಭತ್ಯೆಯನ್ನು 100 ರೂ.ಯಿಂದ 200 ರೂ.ಗೆ ಏರಿಕೆ ಮಾಡಿ ಸರ್ಕಾರ ಆದೇಶಿಸಿದೆ.

    ಪ್ರತಿದಿನ ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗುತ್ತಿದ್ದು, ಆಹಾರ ತಯಾರಕರು ಸಹ ಊಟ/ತಿಂಡಿ ಬೆಲೆ ಹೆಚ್ಚಿಸುತ್ತಿದ್ದಾರೆ. ಇದರಿಂದ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ ಸಿಬ್ಬಂದಿಗೆ ದಿನಕ್ಕೆ 100 ರೂ. ಆಹಾರ ಭತ್ಯೆ ನೀಡಲಾಗುತ್ತಿದೆ. ಇದರಲ್ಲಿ ಒಬ್ಬರಿಗೆ ದಿನಕ್ಕೆ ಉಪಹಾರ, ಎರಡು ಊಟ ಮತ್ತು ಎರಡು ಬಾರಿ ಕಾಫಿ/ಟೀ ನೀಡಲು ಸಾಧ್ಯವಾಗುತ್ತಿಲ್ಲ. ಕನಿಷ್ಠ 250 ರೂ. ಬೇಕಾಗುತ್ತಿದೆ. ಅದಕ್ಕಾಗಿ ಆಹಾರ ಭತ್ಯೆಯನ್ನು 250 ರೂ.ಗೆ ಏರಿಕೆ ಮಾಡಬೇಕೆಂದು ಪೊಲೀಸ್ ಇಲಾಖೆ ಗೃಹ ಇಲಾಖೆಗೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿರುವ ಗೃಹ ಇಲಾಖೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗೆ ತಲಾ 100 ರೂ.ಯಿಂದ 200 ರೂ.ಗೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಆದೇಶ ಹೊರಡಿಸಿದ ದಿನಾಂಕದಿಂದಲೇ ಜಾರಿಗೆ ಬರುವಂತೆ ಸೂಚಿಸಿದೆ.

    ಎಂಟು ಮಹಿಳೆಯರನ್ನು ಮದುವೆಯಾಗಿ, ವೇಶ್ಯಾವಾಟಿಕೆ ಮಾಡಿ ಎಂದ ಗಂಡ!

    ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಸ್ಪರ್ಧಿ! ಹೇಗಿದೆ ನೋಡಿ ಈ ಜೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts