ಎಂಟು ಮಹಿಳೆಯರನ್ನು ಮದುವೆಯಾಗಿ, ವೇಶ್ಯಾವಾಟಿಕೆ ಮಾಡಿ ಎಂದ ಗಂಡ!

prostitution
Published on

ಅಮರಾವತಿ: ವ್ಯಕ್ತಿಯೊಬ್ಬ ಎಂಟು ಮಹಿಳೆಯರನ್ನು ಮದುವೆಯಾಗಿ ಅವರನ್ನು ವೇಶ್ಯಾವಾಟಿಕೆ ನಡೆಸಲು ಒತ್ತಾಯಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಆಂಧ್ರದ ಅರುಣ್​ ಹೆಸರಿನ ವ್ಯಕ್ತಿ ಆರೋಪಿ ಸ್ಥಾನದಲ್ಲಿರುವ ಎಂಟು ಹೆಂಡತಿಯರ ಮುದ್ದಿನ ಗಂಡ. ಈತ ಒಂದರ ನಂತರ ಒಂದರಂತೆ ಒಟ್ಟು ಎಂಟು ಮದುವೆಯಾಗಿದ್ದಾನೆ. ಅದಾದ ಮೇಲೆ ಹೆಂಡತಿಯರಿಂದ ವೇಶ್ಯಾವಾಟಿಕೆ ನಡೆಸುವ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ವಿಶಾಖಪಟ್ಟಣಂ ಡಿಸಿಪಿ ಐಶ್ವರ್ಯ ಅವರಿಗೆ ವಿಶೇಷವಾಗಿ ಈ ಪ್ರಕರಣವನ್ನು ತನಿಖೆ ನಡೆಸುವಂತೆ ಆದೇಶ ಹೊರಡಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net