

ಬೆಂಗಳೂರು: ಬಿಗ್ಬಾಸ್ ಸೀಸನ್ 5ರ ಸ್ಪರ್ಧಿಯೊಬ್ಬರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನೇಕ ಧಾರಾವಾಹಿಗಳ ಮೂಲಕವೂ ಕನ್ನಡಿಗರ ಮನಸ್ಸನ್ನು ಗೆದ್ದಿರುವ ಈ ನಟಿಯ ಜೋಡಿಗೆ ನೆಟ್ಟಿಗರು ಶುಭ ಹಾರೈಸಲು ಆರಂಭಿಸಿದ್ದಾರೆ.
ಬಿಗ್ಬಾಸ್ನ ಸೀಸನ್ 5ನ್ನು ನೋಡಿದವರಿಗೆ ಅಶಿತಾ ಚಂದ್ರಪ್ಪ ನೆನಪಿರುತ್ತಾರೆ. ಮುದ್ದಾದ ಮುಖದೊಂದಿಗೆ ಕನ್ನಡಿಗರ ಮನಸ್ಸನ್ನು ಗೆದ್ದವರು ಅವರು. ಇದೀಗ 25 ವಯಸ್ಸಿನವರಾಗಿರುವ ಅವರು ರೋಹನ್ ಗೌಡ ಜತೆ ಹಸೆಮಣೆ ಏರಿದ್ದಾರೆ. ಕರೊನಾ ಕಾರಣದಿಂದಾಗಿ ಕುಟುಂಬಸ್ಥರು ಮತ್ತು ಕೇವಲ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮ ನಡೆಸಲಾಗಿದೆ.
ಅಶಿತಾ ಅವರ ಮದುವೆಯಲ್ಲಿ ನಟ ಜಯರಾಮ್ ಕಾರ್ತಿಕ್, ನಟಿ ತೇಜಸ್ವಿನಿ ಪ್ರಕಾಶ್ ಸೇರಿ ಅನೇಕರು ಕಾಣಿಸಿಕೊಂಡಿದ್ದಾರೆ. ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. (ಏಜೆನ್ಸೀಸ್)