ರೈತ ಹೋರಾಟದ ದಿಕ್ಕು ತಪ್ಪಿಸಲು ರಾಮ ಮಂದಿರ ನಿಧಿ ಸಂಗ್ರಹ ಅಭಿಯಾನ: ಕೋಡಿಹಳ್ಳಿ ಚಂದ್ರಶೇಖರ

kodihalli chandrashekhar
Published on

ಹೊಸಪೇಟೆ (ಬಳ್ಳಾರಿ): ರೈತರ ಹೋರಾಟದ ದಿಕ್ಕು ತಪ್ಪಿಸಲು ಶ್ರೀ ರಾಮ ಮಂದಿರದ ನಿಧಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

ದೆಹಲಿ ಗಡಿಯಲ್ಲಿ ಲಕ್ಷಾಂತರ ರೈತರು ಹೋರಾಟ ನಡೆಸಿದ್ದು, ಈ ಕುರಿತ ವಿವಾದ ಬಗೆಹರಿಸುವುದನ್ನು ಬಿಟ್ಟು ರಾಮ ಮಂದಿರ ನಿರ್ಮಾಣ ಅಭಿಯಾನ ಕೈಗೊಳ್ಳಲಾಗಿದೆ.

ರಾಮ ಮಂದಿರ ನಿರ್ಮಾಣದ ಇದು ಸೂಕ್ತ ಸಂದರ್ಭವಲ್ಲ. ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆದಿದೆ, ಇಂತಹ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಅಗತ್ಯವೇ ಎಂದು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.

ದೇಶದ ಜನರನ್ನು ಭಾವನಾತ್ಮಕ ವಿಚಾರಗಳಿಂದ ದಿಕ್ಕ ತಪ್ಪಿಸಲಾಗುತ್ತಿದೆ. ಮನ್ ಕೀ ಬಾತ್ ನಲ್ಲಿ ಪ್ರಧಾನಿ ರೈತರ ಸಾವಿನ ಬಗ್ಗೆ ಮಾತನಾಡದೆ ನವ ದಂಪತಿ ಬೀಚ್ ನಲ್ಲಿ ಪ್ಲ್ಯಾಸ್ಟಿಕ್‌ ಆರಿಸುವ ಬಗ್ಗೆ ಹೇಳುತ್ತಾರೆ.

ನಾನೂ ರಾಮನ ಭಕ್ತ, ಆದರೆ, ಕೆಲಸದ ಸಮಯದಲ್ಲಿ ಆರಾಧನೆ ಮಾಡುತ್ತಾ ಕುಳಿತುಕೊಳ್ಳಲು ಆಗುವುದಿಲ್ಲ. ರೈತರ ಹೋರಾಟಕ್ಕೆ‌ ಮೊದಲು ಸ್ಪಂದಿಸಬೇಕು. ಚೀನಾದವರು ಅರುಣಾಚಲ ಪ್ರದೇಶದಲ್ಲಿ ಒಂದು ಹಳ್ಳಿ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಮಾತನಾಡುವ ಧೈರ್ಯ ಇಲ್ಲ. ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net