ಹೊರರಾಜ್ಯಗಳಿಗೆ ರೈಲು ಸಂಚಾರ ಜೂ. 1ರಿಂದ ಆರಂಭ

railway
Published on

ಬೆಂಗಳೂರು: ಈಗಾಗಲೇ ಕೆಲವು ಸ್ಥಳೀಯ ಮಾರ್ಗಗಳಿಗೆ ರೈಲು ಸೇವೆ ಆರಂಭಿಸಿರುವ ರೈಲ್ವೆ ಇಲಾಖೆ, ಹೊರರಾಜ್ಯಗಳಿಗೆ ರೈಲು ಸಂಚಾರ ಸೇವೆಯನ್ನು ಜೂ. 1ರಿಂದ ಆರಂಭಿಸುತ್ತಿದೆ.

ಬೆಂಗಳೂರು- ಹುಬ್ಬಳ್ಳಿ, ಯಶಂತಪುರ- ಶಿವಮೊಗ್ಗ, ವಾಸ್ಕೋಡಗಾಮ/ ಹುಬ್ಬಳ್ಳಿ- ಹಜರತ್ ನಿಜಾಮುದ್ದಿನ್, ಬೆಂಗಳೂರು-ದಾನಪುರ, ಮುಂಬೈ ಕಂಟೋನ್ಮೆಂಟ್- ಬೆಂಗಳೂರು, ಮುಂಬೈ ಕಂಟೋನ್ಮೆಂಟ್-ಗದಗ ವಿಶೇಷ ರೈಲುಗಳು ಜೂನ್ 1ರಿಂದ ಸಂಚರಿಸಲಿವೆ.

ಶಿವಮೊಗ್ಗ-ಯಶವಂತಪುರ, ಯಶವಂತಪುರ-ಹಜರತ್ ನಿಜಾಮುದ್ದೀನ್, ಬೆಂಗಳೂರು-ಮುಂಬೈ ಕಂಟೋನ್ಮೆಂಟ್, ಹೌರಾ-ಯಶವಂತಪುರ, ಗದಗ-ಮುಂಬೈ ಕಂಟೋನ್ಮೆಂಟ್ ನಡುವೆ ವಿಶೇಷ ರೈಲುಗಳು ಜೂನ್ 2ರಿಂದ ನಿತ್ಯವೂ ಸಂಚರಿಸಲಿವೆ.

ಹಜರತ್ ನಿಜಾಮುದ್ದೀನ್- ವಾಸ್ಕೋಡಗಾಮ/ ಹುಬ್ಬಳ್ಳಿ ಹಾಗೂ ದಾನಪುರ- ಕೆಎಸ್‌ಆರ್ ಬೆಂಗಳೂರು ವಿಶೇಷ ರೈಲುಗಳು ಜೂನ್ 3ರಿಂದ ಪ್ರಯಾಣಿಸಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net