More

    ಸಾವರ್ಕರ್ ಹೆಸರಿನ ವಿವಾದ: ಮೇಲ್ಸೇತುವೆ ಉದ್ಘಾಟನೆಯೇ ಮುಂದೂಡಿಕೆ!

    ಬೆಂಗಳೂರು: ಯಲಹಂಕದ ಬಳಿ ಗುರುವಾರ ಬೆಳಗ್ಗೆ ಉದ್ಘಾಟನೆಗೊಳ್ಳಬೇಕಿದ್ದ ‘ವೀರ ಸಾವರ್ಕರ್ ಮೇಲ್ಸೇತುವೆ’ ಉದ್ಘಾಟನಾ ಕಾರ‌್ಯಕ್ರಮ, ಹೆಸರಿನ ವಿವಾದದ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

    ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ಇಡುವ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ತೀವ್ರ ವಿವಾದ ಸೃಷ್ಟಿಯಾಗಿತ್ತು. ಸಾವರ್ಕರ್ ಹೆಸರು ಇಡುವುದನ್ನು ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಸಿ.ಟಿ. ರವಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಸಮರ್ಥಿಸಿಕೊಂಡಿದ್ದರು.

    ಇದನ್ನೂ ಓದಿ  ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ನಿರ್ಧಾರ ಕೈಬಿಟ್ಟಿತೇ ರಾಜ್ಯ ಸರ್ಕಾರ…

    ಆದರೆ ಸಂಜೆಯಾಗುತ್ತಿದ್ದಂತೆಯೇ ಬಿಬಿಎಂಪಿಯಿಂದ ಪರಿಷ್ಕೃತ ಆಹ್ವಾನ ಪತ್ರಿಕೆಯು ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ರವಾನೆಯಾಯಿತು. ಅದರಲ್ಲಿ ವೀರ ಸಾವರ್ಕರ್ ಅವರ ಹೆಸರೇ ನಾಪತ್ತೆಯಾಗಿತ್ತು. ಸಿಎಂ ಕಚೇರಿ ನಿರ್ದೇಶನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಲವು ಮೂಲಗಳು ತಿಳಿಸಿದರೆ, ನಾಮಕರಣಕ್ಕೆ ಮುನ್ನ ಸರ್ಕಾರ ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸುವುದು ಬಾಕಿ ಇರುವುದರಿಂದ ನಾಮಕರಣ ಸದ್ಯಕ್ಕೆ ಮಾಡುತ್ತಿಲ್ಲ ಎಂದು ಇನ್ನು ಕೆಲವು ಮೂಲಗಳು ಹೇಳಿದ್ದವು.

    ಇದಾದ ಬಳಿಕ ಗುರುವಾರ ರಾತ್ರಿ ಹೊತ್ತಿಗೆ ಮೇಲ್ಸೇತುವೆ ಉದ್ಘಾಟನಾ ಕಾರ‌್ಯಕ್ರಮವೇ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಸುದ್ದಿ ಬಂದಿದೆ. ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ಹೆಚ್ಚಿನ ಜನ ಸೇರುತ್ತಾರೆಂಬ ಆತಂಕದ ಹಿನ್ನೆಲೆಯಲ್ಲಿ ಕಾರ‌್ಯಕ್ರಮ ಮುಂದೂಡುತ್ತಿರುವುದಾಗಿ ಬಿಬಿಎಂಪಿ ತಿಳಿಸಿದೆ.

    ತಮಿಳುನಾಡಿನಲ್ಲಿ ಒಂದೇ ದಿನ 817 ಕರೊನಾ ಸೋಂಕಿತರು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts