ತಮಿಳುನಾಡಿನಲ್ಲಿ ಒಂದೇ ದಿನ 817 ಕರೊನಾ ಸೋಂಕಿತರು ಪತ್ತೆ

thamil nadu corona
Published on

ಚೆನ್ನೈ: ನೆರೆ ರಾಜ್ಯ ತಮಿಳುನಾಡಿನಲ್ಲಿ 24 ತಾಸು ಅವಧಿಯಲ್ಲಿ 817 ಕರೊನಾ ಸೋಂಕಿತ ಹೊಸ ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ಒಂದೇ ದಿನ 817 ಕರೊನಾ ಸೋಂಕಿತರು ಪತ್ತೆಯಾಗಿರುವುದು ಇದೆ ಮೊದಲು. ರಾಜ್ಯದಲ್ಲಿ ಕರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು ಜನರು ಭೀತಿಯಲ್ಲಿದ್ದಾರೆ.

ರಾಷ್ಟ್ರದಲ್ಲಿ ಸದ್ಯ ಸೋಂಕಿತರ ಸಂಖ್ಯೆ 1.51 ಲಕ್ಷ ದಾಟಿದೆ. ಮೃತಪಟ್ಟವರ ಸಂಖ್ಯೆ 4,337 ಕ್ಕೆ ಏರಿದೆ. ವಿಶ್ವದಲ್ಲಿ ಸೋಂಕಿಗೆ ತುತ್ತಾಗಿ 3,50,000 ಮೃತಪಟ್ಟಿದ್ದಾರೆ. 5.58 ಮಿಲಿಯನ್​ ಮಂದಿಗೆ ಸೋಂಕು ತಗುಲಿದೆ.

ಕರೊನಾ ವೈರಸ್​ ಸೋಂಕಿಗೆ ಇನ್ನು ಲಸಿಕೆ ಇಲ್ಲದ ಹಿನ್ನೆಲೆಯಲ್ಲಿ ಎಲ್ಲ ಔಷಧ ಸಂಶೋಧನಾ ಕೇಂದ್ರಗಳು ಹಾಗೂ ವೈದ್ಯರು ಲಸಿಕೆ ಪತ್ತೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಮೆರಿಕಾ ಲಸಿಕೆ ಸಂಶೋಧನೆ ಹಣ ನೀಡುವುದಾಗಿ ಘೋಷಿಸಿದೆ.

ರಾಷ್ಟ್ರದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್​ಡೌನ್​ 4.0 ಮೇ 31ಕ್ಕೆ ಅಂತ್ಯಗೊಳ್ಳಲಿದೆ.

ದೇವಾಲಯ, ಮಾಲ್​ಗಳನ್ನು ತೆರೆಯಬೇಕು ಎನ್ನುವ ಕೂಗು ಎದ್ದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net