ಮತ್ತೊಮ್ಮೆ ರಾಷ್ಟ್ರ ರಾಜಕೀಯಕ್ಕೆ ದೇವೇಗೌಡ ಎಂಟ್ರಿ!

HD devegowda
Published on

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡರು ರಾಷ್ಟ್ರರಾಜಕೀಯ ಅಖಾಡಕ್ಕಿಳಿಯಲು ಮತ್ತೊಮ್ಮೆ ರೆಡಿಯಾಗಿದ್ದಾರೆ.

ರಾಜ್ಯಸಭೆ ಮೂಲಕ ಸಂಸತ್ತು ಪ್ರವೇಶಿಸಲು ಹಸಿರು ನಿಶಾನೆ ನೀಡಿದ್ದು, ಮೇಲ್ಮನೆ ಮೇಲಾಟಕ್ಕೆ ಮತ್ತೆ ತೆರೆಮರೆಯಲ್ಲಿ ಹಳೇ ದೋಸ್ತಿಗಳ ರಾಜಕೀಯ ಶುರುವಾಗಲಿದೆ.

ಜೂನ್​ 25 ರಂದು ಕುಪೇಂದ್ರ ರೆಡ್ಡಿ ಸ್ಥಾನ ತೆರವಾಗಲಿದೆ. ವಿಧಾನಸಭೆಯಿಂದ ರಾಜ್ಯಸಭೆ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಜೆಡಿಎಸ್​ ಅಭ್ಯರ್ಥಿಯಾಗಿ 87 ವರ್ಷದ ದೇವೇಗೌಡರು ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಗೌಡರ ಮನೆಯಲ್ಲಿ ನಡೆದ ಗೌಪ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯಸಭೆಗೆ ಆಯ್ಕೆಯಾಗಲು 48 ಶಾಸಕರ ಬೆಂಬಲ ಬೇಕು. ಆದರೆ, ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಬಲ ಕೇವಲ 34 ಇದೆ. ಉಳಿದ ಬೆಂಬಲವನ್ನು ಕಾಂಗ್ರೆಸ್​ ಶಾಸಕರಿಂದ ಪಡೆಯಲು ಜೆಡಿಎಸ್​ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ ಜತೆಗೂ ದೇವೇಗೌಡರು ಮಾತುಕತೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net