More

    6 ಲಕ್ಷ ರೂ. ಮೌಲ್ಯದ ಚಿನ್ನಾಭರವಣ ಕಳವು

    ಹಾಸನ: ಕಿಟಕಿಯ ಮೇಲೆ ಇಟ್ಟಿದ್ದ ಡೋರ್ ಲಾಕ್ ಕೀ ತೆಗೆದುಕೊಂಡು ಖದೀಮರು ಮನೆಯ ಬೀಗವನ್ನು ತೆಗೆದು ಸುಮಾರು 6 ಲಕ್ಷ ರೂ. ಮೌಲ್ಯದ 131 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 40 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
    ಹೊಳೇನರಸೀಪುರ ತಾಲೂಕಿನ ಕಸಬಾ ಹೋಬಳಿಯ ಸಂಕನಹಳ್ಳಿ ಗ್ರಾಮದ ಯೋಗೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
    ಸಂಬಂಧಿಕರ ಮದುವೆಗೆಂದು ಯೊಗೇಶ್ ಹಾಗೂ ಅವರ ಪತ್ನಿ ಮಧುರಾ ಅವರು ಹೊಳೆನರಸೀಪುರದ ವೀರಭದ್ರೇಶ್ವರ ಕಲ್ಯಾಣ ಮಂಟಪ ಮೇ 6ರಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಮನೆಯ ಡೋರ್‌ಲಾಕ್ ಮಾಡಿ ಕೀ ಅನ್ನು ಅಲ್ಲೇ ಪಕ್ಕದಲ್ಲಿದ್ದ ಕಿಟಕಿಯ ಮೇಲಿಟ್ಟು ಹೋಗಿದ್ದರು. ಮದುವೆ ಮುಗಿಸಿಕೊಂಡು ವಾಪಸ್ ಸಂಜೆ ಸುಮಾರು 6.30ಕ್ಕೆ ಬಂದು ಕಿಟಕಿಯ ಮೇಲಿಟ್ಟಿದ್ದ ಕೀ ತೆಗೆದು ಒಳಹೋಗಿ ನೋಡಿದಾಗ ಬೀರುವಿನ ಬೀಗ ತೆರೆದಿರುವುದನ್ನು ನೋಡಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಬೀರುವಿನಲ್ಲಿಟ್ಟಿದ್ದ ಅಂದಾಜು 6 ಲಕ್ಷ ರೂ. ಬೆಲೆ ಬಾಳುವ ಸುಮಾರು 131 ಗ್ರಾಂ ತೂಕದ ಚಿನ್ನದ ಆಭರಣಗಳು ಹಾಗೂ 40 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಕಳ್ಳರು ತೋಚಿಕೊಂಡು ಹೋಗಿದ್ದಾರೆ. ಘಟನೆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts