More

    ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಗುರುವಾರ ಅಧಿಸೂಚನೆ

    ಕೊಪ್ಪಳ: ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಗೆ ಮೇ 9 ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ತಿಳಿಸಿದ್ದಾರೆ.

    ಮೇ 16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 17ಕ್ಕೆ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಮೇ 20 ಕೊನೇ ದಿನ. ಜೂನ್​ 3ರಂದು ಮತದಾನ ಇರಲಿದ್ದು, ಜೂನ್​ 6ಕ್ಕೆ ಮತ ಎಣಿಕೆ ನಡೆಯಲಿದೆ. ಕುಷ್ಟಗಿ ತಾಲೂಕಿನಲ್ಲಿ 1,523 ಪುರುಷ, 620 ಮಹಿಳೆ ಒಟ್ಟು 2,143 ಪದವೀಧರರ ಮತದಾರರಿದ್ದಾರೆ. ಕಾರಟಗಿ ತಾಲೂಕಿನಲ್ಲಿ 767 ಪುರುಷ, 347 ಮಹಿಳೆ ಒಟ್ಟು 1,114, ಕನಕಗಿರಿ ತಾಲೂಕಿನಲ್ಲಿ 474 ಪುರುಷ, 182 ಮಹಿಳೆ ಒಟ್ಟು 656, ಗಂಗಾವತಿ ತಾಲೂಕಿನಲ್ಲಿ 1,908 ಪುರುಷ, 1,229 ಮಹಿಳೆ ಒಟ್ಟು 3,137 ಮತದಾರಿದ್ದಾರೆ.

    ಯಲಬುರ್ಗಾ ತಾಲೂಕಿನಲ್ಲಿ 928 ಪುರುಷ, 380 ಮಹಿಳೆ ಸೇರಿ 1,308, ಕುಕನೂರು ತಾಲೂಕಿನಲ್ಲಿ 718 ಪುರುಷ, 358 ಮಹಿಳೆ ಒಟ್ಟು 1,076, ಕೊಪ್ಪಳ ತಾಲೂಕಿನಲ್ಲಿ 2,608 ಪುರುಷ, 1,363 ಮಹಿಳೆ ಸೇರಿ 3,971 ಮತರರಾದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 8,926 ಪುರುಷ ಹಾಗೂ 4,479 ಮಹಿಳೆ ಒಟ್ಟು 13,405 ಪದವೀಧರರ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts